

ಮೈಸೂರು: ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿರುವ ಕ್ರೀಡಾಕೂಟಕ್ಕೆ ಕಾಲೇಜಿನ ವಿದ್ಯಾರ್ಥಿನಿಯಾದ ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಪಟು ಎಂ. ಸಂಯುಕ್ತ ಚಾಲನೆ ನೀಡಿದರು.
ನಗರದ ಎಂಐಟಿಎಂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಎಂಐಟಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ನರೇಶ್‌ಕುಮಾರ್ ಅವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
100, 200, 400 ಮೀಟರ್ ಓಟದ ಸ್ಪರ್ಧೆ, ಗುಂಡು ಎಸೆತ, ತಟ್ಟೆ ಎಸೆತ ಮತ್ತು ಉದ್ದ ಜಿಗಿತ ಇನ್ನಿತರ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಾದವರಿಗೆ ಎಂಇಟಿ ಅಧ್ಯಕ್ಷ ಡಾ. ಎಸ್. ಮುರಳಿ, ಮೈಸೂರು ವಿಶ್ವವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಡಿ.ಎಸ್. ಗುರು ಅವರು ಬಹುಮಾನ ವಿತರಿಸಿದರು.
ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆ ಸಂಯೋಜಕ ಎನ್.ಆರ್. ಮಂಜುನಾಥ್, ಗೋಪಾಲಸ್ವಾಮಿ ಕಾಲೇಜಿನ ಪ್ರಾಂಶುಪಾಲ ಬಿ. ಸುರೇಶ್ ಯಡಿಯಾಳ್, ಉಪಪ್ರಾಂಶುಪಾಲ ಡಾ. ಶಂಭುಲಿಂಗ ಉಪಾಧ್ಯಾಯ, ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಮ್‌ಪ್ರಸಾದ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಎಂ.ಎನ್. ಭಾರತಿ, ವ್ಯವಸ್ಥಾಪಕ ಬಿ.ಆರ್. ದಿನೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಶಂಭುಲಿಂಗ ಶೆಟ್ಟಿ, ತುಕರಾಮ್ ಕುಮಾರ್ ಸಿಂಗ್ ಇತರರು ಇದ್ದರು.