

ರಾಘವೇಂದ್ರ ದಾಸರಹಳ್ಳಿ ಕೊರಟಗೆರೆ
ಶಾಲಾ&ಕಾಲೇಜುಗಳ ಬಡ ಹೆಣ್ಣು ಮಕ್ಕಳಿಗೆ ವಿತರಣೆಯಾಗಬೇಕಾದ ಸ್ಯಾನಿಟರಿ ಪ್ಯಾಡ್ಗಳು ಆರೋಗ್ಯ ಇಲಾಖೆ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಸರ್ಕಾರಿ ಆಸ್ಪತ್ರೆ ಆವರಣದ ಗೋದಾಮಿನಲ್ಲೇ ಧೂಳು ಹಿಡಿಯುತ್ತಿವೆ.
ಆಶಾ ಕಾರ್ಯಕರ್ತೆಯರ ಮೂಲಕ ಶಾಲಾ&ಕಾಲೇಜುಗಳ ಹೆಣ್ಣು ಮಕ್ಕಳಿಗೆ ಉಚಿತವಾಗಿ ತಲುಪಬೇಕಾದ
ಲಾಂತರ ರೂಪಾಯಿ ಮೌಲ್ಯದ ಸ್ಯಾನಿಟರಿ ಪ್ಯಾಡ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ, ತಾಲೂಕು ವೈದ್ಯಾಧಿಕಾರಿ ವಿಜಯ್ ಕುಮಾರ್ ಗಮನಹರಿಸಿಲ್ಲ. ಸ್ಯಾನಿಟರಿ ಪ್ಯಾಡ್ಗಳು ಮತ್ತು ವೈದ್ಯಕಿಯ ವಸ್ತುಗಳು ಸರ್ಕಾರಿ ಆಸ್ಪತ್ರೆ ವಠಾರದಲ್ಲಿ ಬಿದ್ದಿದ್ದರೂ ಅವುಗಳ ಉಪಯೋಗ ಮಾಡಿಕೊಳ್ಳಲು ರ್ನಿಲಕ್ಷ$್ಯ ತೋರಿದ್ದು, ಸರ್ಕಾರದ ಯೋಜನೆ ಮೂಲೆ ಸೇರಿದಂತಾಗಿದೆ.
ಎರಡು ವರ್ಷದಿಂದ ಕರೊನಾ ಕಾರಣಕ್ಕೆ ಸ್ಯಾನಿಟರಿ ಪ್ಯಾಡ್ ವಿತರಿಸಲಾಗಿಲ್ಲ ಎಂದು ಹೇಳುವ ಅಧಿಕಾರಿಗಳು, ಅವುಗಳ ವಿಲೇವಾರಿಗೆ ಏನು ಮಾಡಬೇಕೋ ಆ ವ್ಯವಸ್ಥೆ ಮಾಡಿ ಕೈ ತೊಳೆದುಕೊಳ್ಳಲು ತೀರ್ಮಾನಿಸಿದ್ದಾರೆ.
ಆಸ್ಪತ್ರೆ ಆವರಣದಲ್ಲಿರುವ ಗೋದಾಮಿಗೆ ಯಾವ ಭದ್ರತೆಯೂ ಇಲ್ಲ. ಹೀಗಾಗಿ ಮಳೆ ನೀರೆಲ್ಲ ಒಳಗೆ ನಿಂತಿದ್ದು, ಪ್ಯಾಡ್ಗಳು ಒದ್ದೆಯಾಗಿ ಕೊಳೆಯಲಾರಂಭಿಸಿವೆ. ಆದರೂ ಇಲ್ಲಿಯವರೆಗೂ ಇತ್ತಕಡೆ ಗಮನಹರಿಸದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಇಷ್ಟಕ್ಕೂ ಗೋದಾಮಿನಲ್ಲಿ ಏನಿದೆ, ಏನಿಲ್ಲ ಎಂಬುದರ ಅರಿವೇ ಇಲ್ಲದಂತಿದ್ದಾರೆ.
ವೈದ್ಯರ ಕೊರತೆ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು, ತಾಲೂಕಿನಲ್ಲಿ ಇರುವುದು ಒಂದೇ ಸರ್ಕಾರಿ ಆಸ್ಪತ್ರೆ. ಇಲ್ಲಿ ಕೇವಲ ಬೆರಳೆಣಿಕೆಯಷ್ಟು ವೈದ್ಯರಿದ್ದು, ಹೆಚ್ಚಿನ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಆರೋಗ್ಯಾಧಿಕಾರಿ ಪುಷ್ಪಲತಾ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದಾರೆಯಾದರೂ ಇದುವರೆಗೆ ಕ್ರಮ ಜರುಗಿಸಿಲ್ಲ ಎಂದು ತಿಳಿದುಬಂದಿದೆ.
ಕಳೆದ ಎರಡು ವರ್ಷಗಳಿಂದ ಕರೊನಾ ಇದ್ದ ಕಾರಣ ಪ್ಯಾಡ್ಗಳನ್ನು ವಿತರಿಸಿಲ್ಲ. ಅದೇ ರೀತಿ ಅವುಗಳನ್ನು ನಿಷ್ಕ್ರಿಯ ಮಾಡಲು ಗೋದಾಮಿನಲ್ಲಿ ಇಡಲಾಗಿತ್ತು, ಸತತ ಮಳೆ ಇರುವ ಕಾರಣ ಕಟ್ಟಡ ಹಳೆಯದಾದ್ದರಿಂದ ಸಮಸ್ಯೆ ಎದುರಾಗಿದೆ. ಶೀಘ್ರ ಸಮಸ್ಯೆ ಪರಿಹಾರ ಕಲ್ಪಿಸಲಾಗುವುದು. > -ಡಾ.ವಿಜಯ್ಕುಮಾರ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ, ಕೊರಟಗೆರೆ ಸರ್ಕಾರ ರೂಪಿಸಿರುವ ಯೋಜನೆಗಳು ಮತ್ತು ಅದಕ್ಕಾಗಿ ವ್ಯಯ ಮಾಡುವಂತಹ ಹಣದ ಮಾಹಿತಿ ಎಷ್ಟಿದೆ ಎನ್ನುವುದರ ಅರಿವೇ ಅಧಿಕಾರಿಗಳಿಗೆ ಇರುವುದಿಲ್ಲ, ನಮ್ಮ ಟ್ಯಾಕ್ಸ್ ಹಣದಲ್ಲಿ ಯೋಜನೆಗಳು ರೂಪುಗೊಳ್ಳುತ್ತವೆ, ವಿನಾಕಾರಣ ಹಣ ಪೋಲಾಗುತ್ತಿದೆ, ಮೇಲಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸೂಕ್ತ ಕ್ರಮ ಕೃಗೊಳ್ಳಬೇಕಿದೆ. > -ಲಕ್ಷ್ಮೀನಾರಾಯಣ, ಕೊರಟಗೆರೆ