ಗೋದಾಮಿಗೆ ಬೆಂಕಿ ಬಿದ್ದು ಹಾನಿ

28SPT03
Published on


ಸೋಮವಾರಪೇಟೆ: ಸಮೀಪದ ನೇಗಳ್ಳೆ ಕರ್ಕಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕೃಷಿ ಪರಿಕರಗಳು ಹಾನಿಯಾಗಿವೆ.
ಗ್ರಾಮದ ಕೃಷಿಕ ಕೆ.ಕೆ.ಬಸಪ್ಪ ಅವರ ಗೋದಾಮಿನಲ್ಲಿ ಬೆಂಕಿ ಕಂಡು ಬಂದ ತಕ್ಷಣವೇ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಆದರೆ ಅಷ್ಟರಲ್ಲಾಗಲೇ ಎರಡೂವರೆ ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಕೃಷಿ ಪರಿಕರಗಳು ಸಂಪೂರ್ಣ ನಾಶಗೊಂಡಿದ್ದವು. ಗೋದಾಮಿನ ಛಾವಣಿ ಒಡೆದು ಹೋಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಮಾಲೀಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net