ಗೋಣಿಚೀಲದಲ್ಲಿ ಶವ ಪತ್ತೆ

Capture2
Published on

ಔರಾದ್: ತಾಲೂಕಿನ ಕಂದಗೂಳ ಗ್ರಾಮದ ಹತ್ತಿರ ಮಾಂಜ್ರಾ ನದಿ ದಂಡೆ ಮೇಲೆ ಸೋಮವಾರ ಗೋಣಿ ಚೀಲದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಚೀಲದಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲಿ 30-35 ವಯೋಮಾನದ ಮೃತದೇಹ ಕಂಡುಬಂದಿದೆ. ಈ ಸಂಬಂಧ ಏನಾದರೂ ಮಾಹಿತಿ ಲಭ್ಯವಾದರೆ ಸಂತಪುರ ಪೊಲೀಸ್ ಠಾಣೆ ಪಿಎಸ್ಐ ಸಿದ್ದಲಿಂಗ ಅವರ ಮೊ:9480803469 ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net