

ಗೋಣಿಕೊಪ್ಪ: ಬೆಂಗಳೂರಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಬ್ರೈನೊ ಬ್ರೈನ್‌ಫೆಸ್ಟ್‌ನಲ್ಲಿ ಗೋಣಿಕೊಪ್ಪದ ಬ್ರೈನೋ ಬ್ರೈನ್ ಮಕ್ಕಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಧೃವ್ ನಾಣಯ್ಯ, ಖದೀಜಾ, ಮೌಲ್ಯ ಮುತ್ತಮ್ಮ, ನೂತನ್, ರಿಷಬ್ ಕಾರಿಯಪ್ಪ, ಸಿನಾನ್, ಉತ್ಕರ್ಷ ಉತ್ತಯ್ಯ, ಯುನ್ ಚಿರಾಯು ಚಿನ್ನದ ಪದಕ ಪಡೆದಿದ್ದಾರೆ. ಅಂತೆಯೆ ಆತ್ಮಿಕ್ ದೀಪ್, ಜಾನ್ವಿತ್, ದೀಕ್ಷಾನಾಯಕ್, ಜ್ಞಾನೇಶ್, ಮೋನಿತ್ ಕಾರ್ಯಪ್ಪ, ನಿಧಿ ನಾಯಕ್, ಸಂದೇಶ್‌ಕುಮಾರ್, ಉತ್ಸವ್ ಉತ್ತಪ್ಪ ಬೆಳ್ಳಿ ಪದಕ ಪಡೆದಿದ್ದಾರೆ. ಬ್ರೈನೋ ಬ್ರೈನ್ ಮುಖ್ಯಸ್ಥೆ ರೂಪಾ ಯತಿರಾಜ್ ತರಬೇತಿ ನೀಡಿದ್ದಾರೆ.
ರಾಜ್ಯ ಮಟ್ಟದ ಫೆಸ್ಟ್‌ನಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಗೋಣಿಕೊಪ್ಪದಿಂದ ಭಾಗವಹಿಸಿದ್ದ 19 ಮಕ್ಕಳಲ್ಲಿ ಮೂವರು ಚಾಂಪಿಯನ್, ಎಂಟು ಚಿನ್ನ ಹಾಗೂ ಎಂಟು ಬೆಳ್ಳಿ ಪದಕ ಗಳಿಸಿದ್ದಾರೆ. ಕುಮಾರಿ ನವಿಕಾ ದೇಚಮ್ಮ, ಹರಿತ್ ಕರುಂಬಯ್ಯ ಹಾಗೂ ಕನ್ನಿಕಾ ಪ್ರಶಾಂತ್ ಚಾಂಪಿಯನ್ ಪಟ್ಟಕ್ಕೆ ಭಾಜನರಾಗಿದ್ದಾರೆ.