ಗೋಡೆ ಕುಸಿತ ಗಾಯ

Wall collapse injury
ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಶೌಚಗೃಹದ ಗೋಡೆ ಕುಸಿದು ಗಾಯಗೊಂಡ ಮಹಿಳೆಯಗೆ ಜಿಲ್ಲಾಸ್ಪತ್ರೆಯ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು.
Published on

ವಿಜಯಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಕೆಲ ಅನಾಹುತಗಳು ಸಂಭವಿಸುತ್ತಿವೆ. ಮಳೆಗೆ ನೆನೆದು ಸಾರ್ವಜನಿಕ ಶೌಚಗೃಹದ ಗೋಡೆ ಕುಸಿದ ಪರಿಣಾಮ ಮೂವರು ಮಹಿಳೆಯರಿಗೆ ಗಾಯವಾದ ಘಟನೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ನಡೆದಿದೆ.

ಜಿಟಿಜಿಟಿ ಮಳೆಯಿಂದ ಗೋಡೆ ಶಿಥಿಲಗೊಂಡಿತ್ತು. ಈ ವೇಳೆ ಮಹಿಳೆಯರು ಶೌಚಗೃಹ ಉಪಯೋಗಿಸಲು ಹೋದಾಗ ಗೋಡೆ ಏಕಾಏಕಿ ಕುಸಿತ ಕಂಡಿದೆ. ಇದರಲ್ಲಿ ಮೂವರು ಮಹಿಳೆಯರು ಸಿಲುಕಿ ಹಾಕಿಕೊಂಡಿದ್ದಾರೆ, ಇದನ್ನು ಗಮನಿಸಿದ ಗ್ರಾಮಸ್ಥರು ಮೂವರು ಮಹಿಳೆಯರನ್ನು ಶೌಚಗೃಹದಿಂದ ಹೊರತೆಗೆದು ಅವರನ್ನು ರಕ್ಷಿಸಿದ್ದಾರೆ.

ಕಮಲಾಬಾಯಿ ಬಗಲಿ, ಮುಸ್ಕಾನ್ ಕೊಲ್ಹಾರ ಹಾಗೂ ಮುರ್ತುಜಬೀ ಭಾಂಗಿ ಎಂಬ ಮೂವರು ಮಹಿಳೆಯರು ಗಾಯಗೊಂಡಿದ್ದು ಅವರನ್ನು ಅಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net