ಗೋಕುಲೋತ್ಸವ

w
Published on

ಧಾರವಾಡ: ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಗರದ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೆ. 6ರಂದು ಸಂಜೆ 5 ಗಂಟೆಗೆ ಇಲ್ಲಿನ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಗೋಕುಲೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಾಕಾರ ಸಾಂಸ್ಕೃತಿಕ ಹಾಗೂ ಮಾಧ್ಯಮ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಶುಭದಾ ಸಿ. ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಭರತ ನೃತ್ಯ ಅಕಾಡೆಮಿ ಅಧ್ಯಕ್ಷ ವಿದ್ವಾನ್ ರಾಜೇಂದ್ರ ಟೊಣಪಿ, ಕಲಾರ್ಪಣ ಟ್ರಸ್ಟ್ ಅಧ್ಯಕ್ಷೆ ವಿದುಷಿ ಸವಿತಾ ಹೆಗಡೆ, ವಿನಯ ಇರಕಲ್ ಆಗಮಿಸುವರು. ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ವಿದ್ವಾನ್ ರಾಜೇಂದ್ರ ಟೊಣಪಿ ನಿರ್ದೇಶನದಲ್ಲಿ ಸಮೀಕ್ಷಾ ಶೆಟ್ಟಿ, ಪವಿತ್ರಾ ಮತ್ತಿಹಳ್ಳಿ, ಶಿವಾನಿ ಹಂಜಿ, ಗಂಗೋತ್ರಿ ಏಣಗಿ, ಪ್ರಾಚೀ ಸುಲಾಖೆ, ಶ್ರೇಯಾ ತೆಗ್ಗಿಹಳ್ಳಿ, ವೈಷ್ಣವಿ ಆಸಂಗಿ, ಪ್ರೀತಿ ಹಂಜಿ, ವರ್ಷಿಣಿ ಜೊಂಜಾಳೆ, ಸಮನ್ವಿ ಗಾಡೆ, ಪೂರ್ವಿ ತೆಗ್ಗಿಹಳ್ಳಿ, ಶಾರದಾ ಗುಡಿನವರ ನೃತ್ಯ ರೂಪಕಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net