

ಗೋ ರಕ್ಷಣೆಗೆ ಮುಂದಾಗಿದ್ದ ರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ!
ಚಿಕ್ಕೋಡಿ: ಗೋ ಶಾಲೆಯಿಂದ ಬೇರೆಡೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆಗೆ ಮುಂದಾಗಿದ್ದ,ಶ್ರೀ ರಾಮ ಸೇನೆ ಕಾರ್ಯಕರ್ತರ ಮೇಲೆ ಮುಸ್ಲಿಂ ಸಮುದಾಯದ ದಲ್ಲಾಳಿಗಳು ಮನ ಬಂದಂತೆ ಥಳಸಿ ನೈತಿಕ ಪೊಲೀಸಗಿರಿ ಮೆರೆದಿರುವ ಘಟನೆ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಹುಕ್ಕೇರಿ ತಾಲೂಕಿನ ಬೆಳವಿ ಗೋ ಶಾಲೆಯಿಂದ ಗೋವುಗಳನ್ನ ಇಂಗಳಿ ಗ್ರಾಮಕ್ಕೆ ವಾಪಸ್ಸು ಕರೆದೋಯುತ್ತಿದ್ದ ಮುಸ್ಲಿಂ ದಲ್ಲಾಳಿಗಳನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರಶ್ನೆ ಮಾಡಿರುವುದಕ್ಕೆ ರೊಚ್ಚಿಗೆದ್ದ ಮುಸ್ಲಿಂ ದಲ್ಲಾಳಿಗಳು, 5 ಜನ ಶ್ರೀ ರಾಮ ಸೇನೆ ಕಾರ್ಯಕರ್ತರ ಮೇಲೆ ಮಾರಣಾಂತಿಕವಾಗಿ ಮನಬಂದಂತೆ ,ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ.
ಮರಕ್ಕೆ ಕಟ್ಟಿ ಹಾಕಿ ಅಮಾನವೀಯ ಹಲ್ಲೆ ನಡೆಸಿ ವಿಡಿಯೋ ಮಾಡಿದ್ದಾರೆ.ಗೋ ರಕ್ಷಣೆನೆಗೆ ಮುಂದಾಗಿದ್ದ ಹಿಂದು ಕಾರ್ಯಕರ್ತರ ಮೇಲೆ ನೈತಿಕ ಪೊಲೀಸಗಿರಿ ನಡೆಸಿರುವ ಮುಸ್ಲಿಂ ದಲ್ಲಾಳಿಗಳ ಹಲ್ಲೆ ಹಿಂದು ಪರ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿದೆ.
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವುದಾಗಿ ಎಸ್ ಪಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.