ಗೋ ರಕ್ಷಣೆಗಾಗಿ ಗೋಷ್ಪಾದ ಮೆರವಣಿಗೆ

go.jpg
Published on

ದಾವಣಗೆರೆ: ಪ್ರಕೃತಿ ರಕ್ಷಣೆ ಹಾಗೂ ಗೋವುಗಳ ಸಂರಕ್ಷಣೆಗಾಗಿ ದಾವಣಗೆರೆಯಲ್ಲಿ ಶನಿವಾರ ಆರಂಭವಾದ ಶ್ರೀ ಸುರಭಿ ಗೋರಕ್ಷ ದೀಕ್ಷಾ ಯಜ್ಞ ಕಾರ್ಯಕ್ರಮದ ಭಾಗವಾಗಿ ಗೋಷ್ಪಾದ ಮೆರವಣಿಗೆ ನೆರವೇರಿತು.

ಇಬ್ಬರು ತಲೆ ಮೇಲೆ ಹೊತ್ತ ಗೋವಿಂದ ಸ್ವಾಮಿ ಪಾದ, ಹಸುವಿನ ಮೂರ್ತಿ ಹಾಗೂ ಬೆರಣಿಗಳನ್ನು ತುಂಬಿಕೊಂಡ ಅಲಂಕೃತ ಎತ್ತಿನ ಚಕ್ಕಡಿ ಬಂಡಿಯೊಂದಿಗೆ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಿಂದ ಮೆರವಣಿಗೆ ಆರಂಭವಾಯಿತು. ಮೂರ್ತಿಗಳಿಗೆ ಮಾರ್ಗದುದ್ದಕ್ಕೂ ಪುಷ್ಪಾರ್ಚನೆ ಮಾಡಲಾಯಿತು.

ಬಸವರಾಜಪೇಟೆ ಮೂಲಕ ಸಾಗಿ ದೇವರಾಜ ಅರಸು ಬಡಾವಣೆಯ ಬೀರೇಶ್ವರ ಭವನದಲ್ಲಿ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ಸುರಭಿ ಗೋರಕ್ಷಾ ಕಿ ಜೈ, ಗೋಮಾತಾ ಜೈ, ಗಂಗಾ ಮಾತಾ ಕಿ ಜೈ ಘೋಷಣೆ ಮೊಳಗಿದವು. ದೇವರ ನಾಮ, ಕೋಲಾಟ, ನೃತ್ಯಗಳೊಂದಿಗೆ ಭಕ್ತರು ಹೆಜ್ಜೆ ಹಾಕಿದರು. ಮಹಿಳಾ ಸಂಘ, ಸ್ವ-ಸಹಾಯ ಗುಂಪುಗಳ ಸದಸ್ಯಿಣಿಯರು ಭಾಗಿಯಾಗಿದ್ದರು.

ಸುರಭಿದಾಸ ಬ್ರಹ್ಮ ಮಹಿಕಿರಣ್ ಶರ್ಮ, ಬಿಜೆಪಿ ಒಬಿಸಿ ಮೋರ್ಚಾ ಕೋಶಾಧ್ಯಕ್ಷ ಎಸ್.ಎಲ್.ಆನಂದಪ್ಪ, ಕೊಂಡಜ್ಜಿ ನಾಗರಾಜರಾವ್, ಎನ್.ಜೆ.ನಿಂಗಪ್ಪ, ಗುಡ್ಡಪ್ಪ, ಗಣೇಶ್ ಸುರ್ವೆ, ಕುಲಕರ್ಣಿ, ಶಕುಂತಲಾ, ರೂಪಾ ರಾಜು, ರೇಣುಕಾ ಯಲ್ಲಮ್ಮ, ಮಂಜುಳಾ ಮಹೇಶ್ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net