ಗೋ ಮಾಂಸದ ಬಿರಿಯಾನಿ ಬಗ್ಗೆ ಸಮಗ್ರ ತನಿಖೆಯಾಗಲಿ

16 ckm 6 h.p.manjegowda (white shirt)
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ
Published on

ಚಿಕ್ಕಮಗಳೂರು: ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಗೆ ನೀಡಿದ ಗೋಮಾಂಸದ ಬಿರಿಯಾನಿಯನ್ನು ಯಾರು ತಯಾರು ಮಾಡಿದ್ದು, ಯಾರು ತಂದುಕೊಟ್ಟರು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಹಿತರಕ್ಷಣ ವೇದಿಕೆ, ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ನಡೆದ ಪ್ರತಿಭಟನೆ ಬಳಿಕ ಗೋಮಾಂಸದ ಬಿರಿಯಾನಿ ಮತ್ತು ಕಬಾಬನ್ನು ಪೊಲೀಸ್ ಅಧಿಕಾರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ಮನೆಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಕಳಿಸುವುದಾಗಿ ಎಚ್ಚ ರಿಕೆ ನೀಡಿದ್ದಾರೆ. ಗೋಮಾಂಸದ ಬಿರಿಯಾನಿ, ಕಬಾಬ್ ಯಾರು ತಯಾರಿಸಿದರು. ಎಲ್ಲಿಂದ ತರಲಾಯಿತು ಹಾಗೂ ಬಿರಿಯಾನಿ ನೀಡಿದವರು ಮತ್ತು ಪಡೆದುಕೊಂಡವರ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಏಕೆ ಗೋಹತ್ಯೆ ತಡೆಗೆ ಕ್ರಮ ಕೈಗೊಳ್ಳಲಿಲ್ಲ ಹಾಗೂ ಅವರಿಗೆ ಗೋಮಾಂಸದ ಬಿರಿಯಾನಿ, ಕಬಾಬ್ ನೀಡಲು ಸಿ.ಟಿ.ರವಿ ಅವರು ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು.

ವಿದೇಶಕ್ಕೆ ಗೋಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಹೀಗಿರುವಾಗ ಸಿ.ಟಿ.ರವಿ ಅವರು ಪ್ರಧಾನ ಮಂತ್ರಿ, ಗೃಹಮಂತ್ರಿ, ರಕ್ಷಣಾ ಸಚಿವರಿಗೆ ಏಕೆ ಗೋಮಾಂಸದ ಬಿರಿಯಾನಿ, ಕಬಾಬ್ ಕಳಿಸಿಕೊಡಲಿಲ್ಲ. ರಾಜಕೀಯವಾಗಿ ಕಳೆದು ಹೋಗುತ್ತಿz್ದೆÃನೆಂದು ಭಾವಿಸಿ ಇಂತಹ ಕ್ಷುಲಕ ಕಾರಣಗಳನ್ನು ಮುಂದಿಟ್ಟು ಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಸುಭದ್ರ ಸರ್ಕಾರವಿದೆ. ವಿರೋಧಿಸಲು ಸಕಾರಣವಿಲ್ಲದೆ ಗೋಮಾಂಸ ಬಿರಿಯಾನಿ ಪ್ರದರ್ಶಿಸುವಂಥ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ೧೯ ವರ್ಷಗಳಿಂದ ಶಾಸಕರಾಗಿದ್ದ ಸಿ.ಟಿ.ರವಿ ಅವರು ಎಷ್ಟು ಗೋಮಾಂಸದ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಎಷ್ಟು ಹೋರಾಟ ಮಾಡಿದ್ದಾರೆ ಎಂದು ಪ್ರಶ್ನಿಸಿದರಲ್ಲದೆ ಗೋಮಾಂಸದ ಬಿರಿಯಾನಿ ಪ್ರದರ್ಶಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆ ಶಾಂತಿಯಿAದ ಇದ್ದು, ಶಾಂತಿಯನ್ನು ಕದಡುವ ಕೆಲಸ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಮಾಡಬಾರದು ಎಂದು ಹೇಳಿದರು.

ಹಿರೇಗೌಜ ಶಿವಕುಮಾರ್ ಮಾತನಾಡಿ, ವಿದೇಶಕ್ಕೆ ಗೋಮಾಂಸ ರಫ್ತು ಮಾಡುವಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ ಹಾಗಿದ್ದರೇ ಸಂಸದರ ಮೂಲಕ ಪ್ರಧಾನ ಮಂತ್ರಿಗಳಿಗೆ ಗೋಮಾಂಸದ ಬಿರಿಯಾನಿ ಹಾಗೂ ಕಬಾಬ್ ಕಳುಸಿಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿಳಕೆರೆ ಪ್ರವೀಣ್, ಕುರುವಂಗಿ ರಾಜೇಶ್, ಹಿರೆಕೊಳಲೆ ಪ್ರಕಾಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net