ಗೋ ಬ್ಯಾಕ್ ಮೋದಿ ಪ್ರತಿಭಟನೆ

1603Klb01
Published on

ಕಲಬುರಗಿ: ನರೇಗಾ ಕೂಲಿ ಬಿಡುಗಡೆ ಮಾಡದ, ಬರ ಪರಿಹಾರ, ರಾಜ್ಯದ ಪಾಲಿನ ತೆರಿಗೆ ಹಣ ನೀಡದ, ಬೆಂಬಲ ಬೆಲೆ ನಿಗದಿ ಮಾಡದ್ದನ್ನು ಖಂಡಿಸಿ ನಗರದಲ್ಲಿ ಸಿಪಿಐಎಂ ಪಕ್ಷದಿಂದ ಶನಿವಾರ ಗೋ ಬ್ಯಾಕ್ ಪ್ರತಿಭಟನೆ ನಡೆಸಲಾಯಿತು.

ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮೋದಿ ಜನವಿರೋಧಿ ನೀತಿಗಳನ್ನು ಮಾಡುತ್ತಿದ್ದಾರೆ. ಚುನಾವಣೆ ವೇಳೆ ಸುಳ್ಳುಗಳಿಂದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕಾರ್ಪೋರೇಟ್ ಕಂಪನಿಗಳ ಕೈಗೆ ದೇಶ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಗತ್ ವೃತ್ತದಿಂದ ಮೋದಿ ರೋಡ್ ಶೋ ನಡೆಯುವ ಮಾರ್ಗದತ್ತ ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ಪ್ರತಿಭಟನಾಕಾರರಾದ ಕೆ.ನೀಲಾ, ಶರಣಬಸಪ್ಪ ಮಮಶೆಟ್ಟಿ, ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಪಾಂಡುರAಗ ಮಾವಿನಕರ, ಲವಿತ್ರ ವಸ್ತçದ, ಪ್ರಕಾಶ ಜಾನೆ, ಸಿದ್ಧರಾಮ ಹರವಾಳ, ಸುಜಾತಾ ಸೇರಿ ಇತರರನ್ನು ಬಂಧಿಸಿ, ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net