ಗೋಕರ್ಣದಲ್ಲಿ ಸಾರ್ವಜನಿಕ ಗಣೇಶ ವಿಸರ್ಜನೆ

24sdp2
Published on

ಗೋಕರ್ಣ: ಈ ಬಾರಿಯ ಗಣೇಶ ಹಬ್ಬವನ್ನು ಸರ್ಕಾರ ಎರಡು ದಿನಕ್ಕೆ ಮಿತಿಗೊಳಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಎಲ್ಲ ಸಾರ್ವಜನಿಕ ಗಣೇಶ ಮೂರ್ತಿಯನ್ನು ಭಾನುವಾರ ಸಂಜೆ ಸಮುದ್ರಕ್ಕೆ ತಂದು ವಿಸರ್ಜಿಸಲಾಯಿತು.

ಮಹಾಬಲೇಶ್ವರ ಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಪಲ್ಲಕಿ ಉತ್ಸವದೊಂದಿಗೆ ಮೊದಲು ಸಮುದ್ರಕ್ಕೆ ವಿಸರ್ಜಿಸಿದ ನಂತರ ಉಳಿದ ಮೂರ್ತಿಗಳನ್ನು ಸಮರ್ಪಿಸಲಾಯಿತು. ಎಂದಿನ ಮೆರವಣಿಗೆ ಇಲ್ಲದೆ ಮೂರ್ತಿಗಳನ್ನು ಸಂಘ ಸಂಸ್ಥೆಗಳಿಂದ ವಾಹನದ ಮೇಲೆ ಸಮುದ್ರಕ್ಕೆ ತರಲಾಯಿತು. ಹೆಚ್ಚಿನ ಪೊಲೀಸರನ್ನು ಸಮುದ್ರ ತೀರದಲ್ಲಿ ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net