ಗೊಳಸಂಗಿಯಲ್ಲಿ‌ ಕಟ್ಟಿಗೆ ಅಡ್ಡೆ ಅಗ್ನಿಗಾಹುತಿ

IMG-20201205-WA0002
Published on

ಗೊಳಸಂಗಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬಳಿ ಇರುವ ಶಬರಿಮಲೈ ಸ್ವಾಮಿ ಅಯ್ಯಪ್ಪನವರ ಪರಮಭಕ್ತ ಕಾಳಪ್ಪ ಬಡಿಗೇರ ಎಂಬುವರ ಕಟ್ಟಿಗೆ ಅಡ್ಡೆ ಶುಕ್ರವಾರ ಬೆಂಕಿಗೆ ಆಹುತಿಯಾಗಿದೆ.

ಮರದ ಕಟ್ಟಿಗೆಯ ಮೂಲಕ ಮನೆಗೆ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ತಯಾರಿಸುತ್ತಿದ್ದ ಕಾಳಪ್ಪ ಬಡಿಗೇರ ಇವರು ಕಟ್ಟಿ ಗೆ ಅಡ್ಡೆ ನಲ್ಲಿರಿಸಿದ್ದ ರಂದಾ ಮಷಿನ್ ಸೇರಿ ಲಕ್ಷಾಂತರ ರೂ., ಮೌಲ್ಯದ ಆಸ್ತಿಪಾಸ್ತಿಗಳ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಕೊಲ್ಹಾರ ತಾಲೂಕಿನ ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net