

ಹಲಗೂರು: ಗೊಲ್ಲರಹಳ್ಳಿ ಗ್ರಾಮದಲ್ಲಿರುವ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಬೆಳಗಿನ ಜಾವ ದೇವರ ಮೂರ್ತಿಯನ್ನು ಭೀಮಾ ನದಿಯಲ್ಲಿ ಶುಚಿಗೊಳಿಸಿ, ಹೂವು, ಹೊಂಬಾಳೆಯಿಂದ ಅಲಂಕರಿಸಿ ಪೂರ್ಣಕುಂಭ ಮೇಳದೊಡನೆ ವೀರಗಾಸೆ ಕುಣಿತ ಮತ್ತು ಜೋಡಿ ಬಸಪ್ಪ ದೇವರೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.
ನಂತರ ದೇವರಿಗೆ ವಿಶೇಷ ಪುಷ್ಪಗಳಿಂದ ಅಲಂಕರಿಸಿ ಬೆಣ್ಣೆ ಅಲಂಕಾರದಿಂದ ಸಿಂಗರಿಸಿ, ಧಾರ್ಮಿಕ ವಿಧಿ, ವಿಧಾನ ನೆರವೇರಿಸಲಾಯಿತು. ಪೂಜಾ ಪ್ರಕ್ರಿಯೆ ನಂತರ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ಈ ಸಂದರ್ಭ ಊರಿನ ನಾಡಗೌಡರು, ಮುಖಂಡರು, ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.