ಗೊರೂರಿನ ಜಲ ಶುದ್ಧೀಕರಣ ಘಟಕ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ ಭೇಟಿ ಪರಿಶೀಲನೆ

ಗೊರೂರಿನ ಜಲ ಶುದ್ಧೀಕರಣ ಘಟಕ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ ಭೇಟಿ ಪರಿಶೀಲನೆ
Published on

ಹಾಸನ: ಬರಗಾಲದಲ್ಲಿ ಕೂಡ ನಗರದ ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಲು ಸಾಕಷ್ಟು ನೀರು ಲಭ್ಯವಿದ್ದು, ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ ಹೇಳಿದರು.
ಗೊರೂರು ಸಮೀಪದ ಜೀನ್ನನಹಳ್ಳಿ ಗ್ರಾಮದಲ್ಲಿ ಅಮೃತ್ ಕುಡಿಯುವ ನೀರು ಸರಬರಾಜು ಜಲ ಶುದ್ಧೀಕರಣ ಘಟಕಕ್ಕೆ ಶಾಸಕರು ಅಧಿಕಾರಗಳ ಭೇಟಿ ನೀಡಿ ಪರಿಶೀಲನೆ ನಡೆಸಿ ಗೊರೂರಿನ ಹೇಮಾವತಿ ಜಲಾಶಯದಲ್ಲಿ ನೀರಿನ ಲಭ್ಯತೆ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಪ್ರಸ್ತುತ ಹಾಸನ ನಗರಕ್ಕೆ ಪ್ರತಿ ದಿನ 30 ಎಎಲ್‌ಡಿ ನೀರಿನ ಅಗತ್ಯ ಇದೆ ನಗರಸಭೆ ನಗರ ಪಾಲಿಕೆ ಅದಾಗ 38 ಎಂಎಲ್‌ಡಿ ನೀರಿನ ಅಗತ್ಯ ಬರಬಹುದು ಈ ಹಿನ್ನೆಲೆಯಲ್ಲಿ ಡ್ಯಾಂ ನಲ್ಲಿ ನೀರಿನ ಸಂಗ್ರಹ ಹಾಗೂ ಲಭ್ಯತೆ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು.
ಬರಗಾಲದಲ್ಲಿ ಕೂಡ ಹಾಸನದ ಜನರಿಗೆ ಸಮರ್ಪಕ ಕುಡಿಯುವ ನೀರು ಲಭ್ಯವಿದೆ, ಪ್ರಮುಖವಾಗಿ ನಗರ ಪಾಲಿಕೆಗೆ ಒಳಪಟ್ಟಿರುವ 25 ಹಳ್ಳಿಗಳಿಗೆ ನೀರಿನ ಸಮಸ್ಯೆ ಎದುರಾಗಬಹುದು ಆ ಗ್ರಾಮಗಳಿಗೆ ಬೋರ್ವೆಲ್ ಅಥವಾ ಟ್ಯಾಂಕರ್ ಮೂಲಕ ನೀರು ಒದಗಿಸಲು ಯೋಜಿಸಲಾಗಿದೆ ಎಂದು ಹೇಳಿದರು.
ಕುಡಿಯುವ ನೀರಿನ ಅಭಾವ ನಿಯಂತ್ರಿಸಲು ಈಗಾಗಲೇ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಪ್ರತಿ ಶಾಸಕರಿಗೆ 60-70 ಲಕ್ಷ ಅನುದಾನ ನೀಡಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಅತೀ ಶೀಘ್ರವಾಗಿ ಬರ ನಿರ್ವಹಣೆ ಕುರಿತು ಸಭೆ ನಡೆಸಿ ಕುಡಿಯುವ ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಆಯುಕ್ತ ಯೋಗಾನಂದ ಅವರು ಮಾತನಾಡಿ, ಹಾಸನ ನಗರಕ್ಕೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಆದರೆ ಬೇಸಿಗೆ ಸಂಧರ್ಭದಲ್ಲಿ ವಿದ್ಯುತ್ ವ್ಯತ್ಯಯ ಆದಾಗ ಮಾತ್ರ ಕೆಲವೊಮ್ಮೆ ನೀರಿನ ಸಮಸ್ಯೆ ಎದುರಾಗಿದೆ ಆದರೆ ನೀರಿನ ಲಭ್ಯತೆಯನ್ನು ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಈ ಸಂದರ್ಭದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಸಹಾಯಕ ಇಂಜಿನಿಯರ್ ಆನಂದ್, ನಗರಸಭೆ ಆಯುಕ್ತ ಯೋಗನಂದ್, ಎಲೆಕ್ಟ್ರಿಕಲ್ ಇಂಜಿನಿಯರ್ ಕವಿತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು

ವೋಲ್ಟೇಜ್ ಏರಿಳಿತ:
ಕುಡಿಯುವ ನೀರು ಪೂರೈಕೆ ಮಾಡುವ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಲಾಶಯದಿಂದ ನೀರನ್ನು ಪಂಪ್ ಮಾಡಲು ಅಗತ್ಯವಾಗಿರುವ ವಿದ್ಯುತ್ ಸರಬರಾಜು ಮತ್ತು ವೋಲ್ಟೇಜ್ ಸಮಸ್ಯೆಯಾಗುತ್ತಿರುವ ಬಗ್ಗೆ ಅಧಿಕಾರಿಗಳುತಿಲಿಸಿದ್ದು,ಅದನ್ನು ಮುಂದಿನ ದಿನದಲ್ಲಿ ಸರಿಪಡಿಸುವುದಾಗಿ ಸೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.

25 ಹಳ್ಳಿಗೆ ಸಮಸ್ಯೆ:
ನಗರಸಭೆಗೆ ಸೇರ್ಪಡೆಯಾಗಿರುವ ಇತ್ತೀಚೆಗೆ 25 ಹಳ್ಳಿಗಳು ಹೂಸದಾಗಿ ನಗರಸಭೆಗೆ ಸೇರಿರುವುದ್ದರಿಂದ ಕುಡಿಯುವ ನೀರಿಗೆ ಸಮಸ್ಯೆ ಯಾಗಬಹುದು. ಏಕೆಂದರೆ ಅಮೃತ್ ಯೋಜನೆ ಹಾಗೂ ಹೇಮಾವತಿ ನೀರು ಪೂರೈಕೆ ಆಗುವುದಿಲ್ಲ. ಆ ಹಳ್ಳಿಗಳ ಜನರ ಕುಡಿಯುವ ನೀರಿಗೆ ಏನು ಮಾಡಬೇಕು ಎಂಬುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು. ಈಭಾಗದಲ್ಲಿ ಕೊಳವೆ ಬಾವಿ ಪೈಕಿ17 ಬತ್ತಿ ಹೋಗಿವೆ. ಹೊಸ ಬೋರ್ ಕೊರೆಸಬೇಕೋ,ಟ್ಯಾಂಕರ್ ಮೂಲಕ ಪೂರೈಸಲು ಕ್ರಮ ವಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net