ಗೊಬ್ಬಳಿ ಅರಣ್ಯ ಪ್ರದೇಶದಲ್ಲಿ ಚಿರತೆ: ವಿಡಿಯೋ ವೈರಲ್

Published on

ಅರಕಲಗೂಡು: ತಾಲೂಕಿನ ಗೊಬ್ಬಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿ ಜನರಲ್ಲಿ ಭಯ ಹುಟ್ಟಿಸಿದೆ.

ಕಳೆದೊಂದು ತಿಂಗಳಿನಿಂದ ತಾಲೂಕಿನ ಹಲವೆಡೆ ನಿರಂತರವಾಗಿ ಅಡ್ಡಾಡುತ್ತಿರುವ ಚಿರತೆ ಜಾನುವಾರುಗಳನ್ನು ಹಿಡಿದು ಬಲಿ ತೆಗೆದುಕೊಳ್ಳುತ್ತಿದೆ. ಚಿರತೆ ಸೆರೆ ಹಿಡಿಯುವಂತೆ ಜನರು ಆಗ್ರಹಿಸುತ್ತಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸುತ್ತಾಡುತ್ತಿರುವ ಸ್ಥಳದಲ್ಲಿ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿ ಅಲ್ಲಲ್ಲಿ ಬೋನುಗಳನ್ನು ಇಡುತ್ತಿದ್ದರೂ ಸಿಕ್ಕಿಲ್ಲ. ಗೊಬ್ಬಳಿ ಅರಣ್ಯ ಪ್ರದೇಶದಲ್ಲಿ ಪ್ರಮುಖ ಪ್ರತ್ಯಕ್ಷವಾಗಿರುವ ಚಿರತೆ ವಿಡಿಯೋ ಜಾಲ ತಾಣದಲ್ಲಿ‌ ಸದ್ದು ಮಾಡುತ್ತಿದ್ದ ಜನರ ಭೀತಿಗೆ ಕಾರಣಾಗಿದೆ.

ಗೊಬ್ಬಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಇದೆ.‌ಆದರೆ ಜಾಲ ತಾಣದಲ್ಲಿ ಹರಿದಾಡುತ್ತಿರುವ ಚಿರತೆ ವಿಡಿಯೋ ಇಲ್ಲಿಯದಲ್ಲ ಅನ್ನಿಸುತ್ತೆ, ಈ ಕುರಿತು ಪರಿಶೀಲಿಸುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net