ಗೊಬ್ಬರದ ಮೂಟೆ ಬಿದ್ದು ಯುವಕ ಸಾವು

bhr poornesh
Published on

ಬಾಳೆಹೊನ್ನೂರು: ಗೇರುಬೈಲು ಗ್ರಾಮದಲ್ಲಿ ಗೊಬ್ಬರದ ಮೂಟೆ ಮೈಮೇಲೆ ಬಿದ್ದು ಯುವಕ ಮೃತಪಟ್ಟಿದ್ದಾನೆ.

ಕರ್ಕೇಶ್ವರ ಗ್ರಾಮದ ಮೇಲ್ಪಾಲ್‌ನ ಪೂರ್ಣೇಶ್(27) ಮೃತ ದುರ್ದೈವಿ. ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸಿಕೊಂಡಿದ್ದು, ಗುರುವಾರ ಕೃಷಿ ಸಂಘದಿಂದ ಗೇರುಬೈಲಿನ ಖಾಸಗಿ ಎಸ್ಟೇಟ್‌ಗೆ ನೀಡಲು ಗೊಬ್ಬರದ ಮೂಟೆಗಳನ್ನು ಪಿಕ್‌ಅಪ್ ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾನೆ. ಬಳಿಕ ಗೊಬ್ಬರದ ಮೂಟೆಗಳನ್ನು ಪಿಕ್‌ಅಪ್‌ನಿಂದ ಇಳಿಸುವಾಗ ಕಾಲು ಜಾರಿ ಬಿದ್ದಾಗ ಆತನ ಕುತ್ತಿಗೆ ಮೇಲೆ ಗೊಬ್ಬರದ ಮೂಟೆ ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಿಎಸ್‌ಐ ರವೀಶ್ ಸ್ಥಳ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net