ಗೊಬ್ಬರ ತಯಾರಿಸುವ ಘಟಕ ನಿರ್ಮಾಣದ ಭೂಮಿಪೂಜೆ

03_BGP_Purasabhe
Published on

ಬಾಗೇಪಲ್ಲಿ : ಪುರಸಭೆ ಕಸ ವಿಲೇವಾರಿ ಘಟಕದಲ್ಲಿ 60 ಲಕ್ಷ ರೂ.ವೆಚ್ಚದಲ್ಲಿ ಹಸಿ ಕಸದಿಂದ ಗೊಬ್ಬರ ತಯಾರಿಸುವ ಘಟಕ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪುರಸಭೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಸಿರುವ ಆರೋಪ ಕೇಳಿಬಂದಿದೆ.

ಈ ಕುರಿತು ಸ್ವತಃ ಪುರಸಭೆ ಅಧ್ಯಕ್ಷ ಗುಲ್ನಾಜ್‌ಬೇಗಂ ಅಸಮಧಾನ ವ್ಯಕ್ತಪಡಿಸಿದ್ದು, ಶಿಷ್ಟಾಚಾರ ಉಲ್ಲಂಸಿ ಸರ್ಕಾರಿ ಕಾರ್ಯಕ್ರಮ ನಡೆಸಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.

ಪಟ್ಟಣದ ಹೊರವಲಯ ಕಾಶಾಪುರದ ಬಳಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾಮಗಾರಿಗೆ ಬುಧವಾರ ಎಸ್.ಎನ್.ಸುಬಾರೆಡ್ಡಿ ಭೂಮಿಪೂಜೆ ನೆರವೇರಿಸಿದ್ದಾರೆ, ಪುರಸಭೆಯಲ್ಲಿ 23 ಸದಸ್ಯರಿದ್ದಾರೆ, ಆದರೆ ಬೆರಳಣಿಕೆಯಷ್ಟು ಸದಸ್ಯರಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಅಧಿಕಾರಿಗಳನ್ನು ಅಧ್ಯಕ್ಷೆ ತರಾಟೆಗೆ ತೆಗೆದುಕೊಂಡರು.

ಪ್ರತಿಕ್ರಿಯಿಸಿದ ಪ್ರಭಾರ ಮುಖ್ಯಾಧಿಕಾರಿ ಶಿವಂಶಂಕರ, ಗುತ್ತಿಗೆದಾರರು ಹಾಗೂ ಶಾಸಕರು ಭೂಮಿಪೂಜೆ ದಿನಾಂಕ ನಿಗದಿಪಡಿಸಿದ್ದರಿಂದ ತರಾತುರಿಯಲ್ಲಿ ಕಾರ್ಯಕ್ರಮ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಶಾಸಕರಿಂದ ಸಮಾಧಾನ: ಕಾರ್ಯಕ್ರಮದಿಂದ ದೂರ ಉಳಿದಿದ್ದ ಅಧ್ಯಕ್ಷೆ ಗುಲ್ನಾಜ್‌ಬೇಗಂ ಅವರನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸ್ಥಳಕ್ಕೆ ಕರೆಯಿಸಿಕೊಂಡರಾದರೂ, ಅಧಿಕಾರಿಗಳ ಹಾಗೂ ಕೆಲ ಪುರಸಭೆ ಸದಸ್ಯರ ನಡೆಯಿಂದ ಬೇಸರವಾಗಿದೆ ಎಂದು ಅಧ್ಯಕ್ಷೆ ಭಾವುಕರಾದರು.

ಭೂಮಿಪೂಜೆ ವೇಳೆ ಪುರಸಭೆ ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ನಂಜುಂಡ, ಶ್ರೀನಿವಾಸರೆಡ್ಡಿ, ಅಶೋಕರೆಡ್ಡಿ, ಶಭಾನಾ, ಶ್ರೀನಾಥ, ಜಭೀವುಲ್ಲಾ, ಪ್ರಭಾರ ಮುಖ್ಯಾಧಿಕಾರಿ ಶಿವಂಶಂಕರ, ಪರಿಸರ ಅಭಿಯಂತೆ ನಮಸ್ಕೃತಾ, ಶ್ರೀಧರ್ ಮತ್ತಿತರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net