

ಕಲಬುರಗಿ: ಆಳಂದ ವಿಧಾನಸಭೆ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಇಲಾಖೆಯಿಂದ 17 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ನನಗೆ ಗುದ್ದಲಿ ಪೂಜೆಗೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಮೊದಲೇ ತಿಳಿಸಿದರೆ ನಾನು ಕೆಕೆಆರ್ಡಿಬಿ ಹಣವನ್ನು ಬೇರೆ ಕಾಮಗಾರಿಗಳಿಗೆ ಬಳಸುತ್ತಿದೆ. ಹೀಗೆ ಹೇಳದೇ ಕೇಳದೆ ಹಣ ಬಿಡುಗಡೆ ಮಾಡಿದರೆ ಡುಪ್ಲಿಕೇಷನ್ ಆಗುತ್ತದೆ. ಸರ್ಕಾರದ ಹಣ ವ್ಯರ್ಥವಾಗುತ್ತದೆ ಎಂದು ಶಾಸಕ ಬಿ.ಆರ್.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ನಾನು ಕೆಕೆಆರ್ಡಿಬಿಯಿಂದ ಮೌಲನಾ ಅಬುಲ್ ಕಲಾಂ ಶಾಲೆ ಕಟ್ಟುತ್ತಿದ್ದೇನೆ. ಅಲ್ಪಸಂಖ್ಯಾತ ಇಲಾಖೆಯಿಂದ ಪುನ: ಹಣ ಮಂಜೂರು ಮಾಡಿಸಿದ್ದಾರೆ. ನಾನು ಶಾಸಕನಾಗಿ ಬೇಡಿಕೆಯೂ ಮಂಡಿಸಿಲ್ಲ. ಇವರು ಏಕೆ ನೀಡಿದ್ದಾರೆ. ನನಗೆ ಹೇಳದೇ ಕಾಮಗಾರಿ ಮಾಡುತ್ತಿರುವುದರಿಂದ ಹಕ್ಕುಚ್ಯುತಿ ನೋಟಿಸ್ ನೀಡುವಂತೆ ಸಭಾಪತಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.