ಗೊಂಡ ಸಮಾಜದ ಅಭಿವೃದ್ಧಿಗೆ ಬದ್ಧ

28 Kamal Nagar 1
 ಕಮಲನಗರ ತಾಲೂಕಿನ ಚಾಂದೋರಿಯಲ್ಲಿ ಆಯೋಜಿಸಿದ್ದ ಆಯೋಜಿಸಿದ್ದ ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯರ ಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಪ್ರಭು ಚವ್ಹಾಣ್ ಮಾತನಾಡಿದರು. ಬಾಲತಪಸ್ವಿ ಪೂಜ್ಯ ಗೋಪಾಲ ಮುತ್ಯಾ ಉಚ್ಛಾ, ಪೂಜ್ಯ ಕೃಷ್ಣಮಹಾರಾಜ ರಾಮಾಯಣಿ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಗಿರೀಶ ವಡೆಯರ, ಸುನಿತಾ ಬಿರಾದಾರ ಇತರರಿದ್ದರು.
Published on

ಕಮಲನಗರ: ಗೊಂಡ ಸಮಾಜ ಅತ್ಯಂತ ಪುರಾತನ ಇತಿಹಾಸ ಹೊಂದಿದೆ. ಭಕ್ತ ಕನಕದಾಸರು, ಚಂದ್ರಗುಪ್ತ ಮೌರ್ಯರಂತಹ ಅನೇಕ ಇತಿಹಾಸ ಪುರುಷ ವ್ಯಕ್ತಿಗಳನ್ನು ನೀಡಿದ ಈ ಸಮಾಜದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಔರಾದ್ ಶಾಸಕ ಪ್ರಭು ಚವ್ಹಾಣ್ ಭರವಸೆ ನೀಡಿದರು.

ಚಾಂದೋರಿ ಗ್ರಾಮದಲ್ಲಿ ಆಯೋಜಿಸಿದ್ದ ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯರ ಮಂದಿರದ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಭಾಗವಹಿಸಿ ಮಾತನಾಡಿದ ಅವರು, ದುಷ್ಟರ ಸಂಹಾರಕ್ಕಾಗಿ ಭೂಮಿ ಮೇಲೆ ಬೀರದೇವರ ಅವತಾರ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ನಮ್ಮ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣುವ ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ ಗುಡಿಗಳಲ್ಲಿ ಎಲ್ಲ ಸಮುದಾಯದವರು ಬೇಧ-ಭಾವಗಳಿಲ್ಲದೇ ಭಕ್ತಿಭಾವದಿಂದ ಪೂಜೆ ಸಲ್ಲಿಸಿದ್ದಾರೆ ಎಂದರು.

ಬೀರಲಿAಗೇಶ್ವರರ ಮಹಿಮೆ ಅಪಾರವಾಗಿದೆ. ಸತ್ಯ, ನಿಷ್ದೆ, ಪ್ರಮಾಣಿಕತೆಗೆ ಈ ಸಮಾಜ ಬಾಂಧವರು ಹೆಸರುವಾಸಿಯಾಗಿದ್ದಾರೆ. ಇಂದಿನ ಯುವ ಪೀಳಿಗೆ ದೈವಿ ಪುರುಷರು ಮತ್ತು ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸಾಹಿತಿ ಸುನಿತಾ ಬಿರಾದಾರ ಉಪನ್ಯಾಸ ನೀಡಿದರು. ಬಾಲತಪಸ್ವಿ ಪೂಜ್ಯ ಗೋಪಾಲ ಮುತ್ಯಾ ಉಚ್ಛಾ, ಪೂಜ್ಯ ಕೃಷ್ಣಮಹಾರಾಜ ರಾಮಾಯಣಿ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಗಿರೀಶ ವಡೆಯರ, ಪ್ರವೀಣ ಕಾರಬಾರಿ, ವೈಜಿನಾಥ ಸಾಗಾವೆ, ಪ್ರಕಾಶ ಮೇತ್ರೆ, ಶಿವಾಜಿರಾವ ಕಾಳೆ, ಭರತ ಕದಂ, ಬಂಟಿ ರಾಂಪುರೆ, ಉದಯ ಸೋಲಾಪುರೆ, ಸಂಜು ಮುರ್ಕೆ, ಸಚಿನ ಬಿರಾದಾರ, ವೈಜಿನಾಥ ಮೇತ್ರೆ, ಪ್ರೇಮ ಮೂರ್ತಿ, ಓಂಕಾರ ಗಂಗನಬೀಡೆ, ಸಂದೀಪ ಜಾಧವ, ಅಶೋಕ ಮೇತ್ರೆ, ನರಸಿಂಗ ಮೇತ್ರೆ, ಬಂಡೆಪ್ಪ ಕೋಟೆ, ತಾನಾಜಿ ತೋರ್ಣೆಕರ, ನಾಗರಾಜ ಸಾಗಾವೆ, ವೈಜಿನಾಥ ಸಾಗಾವೆ, ದಯಾನಂದ ಸಾಗಾವೆ, ಆಕಾಶ ಸಾಗಾವೆ, ಕೃಷ್ಣಾ ಸಾಗಾವೆ ಇತರರಿದ್ದರು. ರೋಹಿದಾಸ ಮೇತ್ರೆ ನಿರೂಪಣೆ ಮಾಡಿದರು. ಸಂಜುಕುಮಾರ ಮೇತ್ರೆ ಸ್ವಾಗತಿಸಿದರು.

ಪೂಜ್ಯರ ನೇತೃತ್ವದಲ್ಲಿ ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯರ ಮಂದಿರದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು. ಬೆಳಗ್ಗೆಯಿಂದಲೇ ಹೋಮ-ಹವನ, ಪೂಜೆ, ಅರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net