ಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Santosh Joldapke
Published on

ಬೀದರ್: ಶ್ರೀ ಕನಕ ಕನ್ನಡ ಸಾಂಸ್ಕøತಿಕ ಸಂಘದ ವತಿಯಿಂದ ನಗರದ ನೌಬಾದ್‍ನ ವಡ್ಡೆ ಕನ್ವೆನ್ಶನ್ ಹಾಲ್‍ನಲ್ಲಿ ಜುಲೈ 2 ರಂದು ಬೆಳಿಗ್ಗೆ 10ಕ್ಕೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ನೀಟ್ ಹಾಗೂ ಕೆಸಿಇಟಿಯಲ್ಲಿ ಸಾಧನೆಗೈದ ಜಿಲ್ಲೆಯ ಗೊಂಡ (ಕುರುಬ) ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಉದ್ಘಾಟಿಸುವರು. ಔದತ್ತಪುರದ ಮಚ್ಚೇಂದ್ರನಾಥ ಮಹಾರಾಜ ಸಾನಿಧ್ಯ ವಹಿಸುವರು. ಶ್ರೀ ಕನಕ ಕನ್ನಡ ಸಾಂಸ್ಕøತಿಕ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಅಧ್ಯಕ್ಷತೆ ವಹಿಸುವರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಮುಖಂಡ ಅಮೃತರಾವ್ ಚಿಮಕೋಡೆ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ಮಾಜಿ ಸದಸ್ಯ ಬಾಬುರಾವ್ ಮಲ್ಕಾಪುರ, ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ಬಿಡಿಎ ಮಾಜಿ ಅಧ್ಯಕ್ಷ ಮುರಳಿಧರ ಎಕಲಾಕರ್, ಪ್ರಮುಖರಾದ ಎಂ.ಎಸ್. ಕಟಗಿ, ಬಸವರಾಜ ಮಾಳಗೆ, ಬಸವರಾಜ ಝಿಳ್ಳೆ, ಮಲ್ಲಿಕಾರ್ಜುನ ಆರ್. ಯಾತನೂರ, ಪಿ. ನಾಗಪ್ಪ, ಮಾಳಪ್ಪ ಅಡಸಾರೆ ಮುಖ್ಯ ಅತಿಥಿಗಳಾಗಿ, ರಾಜಾರಾಮ ಚಿಟ್ಟಾ, ಹಣಮಂತ ಮಲ್ಕಾಪುರ, ಇಂದುಮತಿ ಚಿದ್ರಿ, ಪೀರಪ್ಪ ಯರನಳ್ಳಿ, ರತಿಕಾಂತ ಜೋಜನಾ, ವಿಜಯಕುಮಾರ ರಾಂಪುರೆ, ಬಾಲಾಜಿ ಕೋಟೆ, ಡಾ. ಬಿ.ಜಿ. ಮಲ್ಲಿಕಾರ್ಜುನ, ಸುಭಾಷ್ ನಾಗೂರೆ, ಅರುಣ ಎಸ್.ಡಿ, ದೇವಪ್ಪ ಚಾಂಬೋಳೆ, ನಾಗರಾಜ ನಂದಗಾಂವ್, ಬಾಬುರಾವ್ ಲದ್ದೆ, ತುಕಾರಾಮ ಚಿಮಕೋಡೆ, ಲೋಕೇಶ ಮೇತ್ರೆ, ಬೊಮ್ಮಗೊಂಡ ಚಿಟ್ಟಾವಾಡಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಾಹಿತಿ ಸಂಜೀವಕುಮಾರ ಅತಿವಾಳೆ ವಿಶೇಷ ಉಪನ್ಯಾಸ ನೀಡುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದವರಿಗೆ ವಿಶೇಷ ಸನ್ಮಾನ, ಭರತನಾಟ್ಯ, ಗಾಯನ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net