

ಯಾದಗಿರಿ: ತಮ್ಮ ಇಲಾಖೆಗೆ ಸಂಬAಧಿಸಿದ ಸಮರ್ಪಕ ಉತ್ತರ ನೀಡಿದ ಮತ್ತು ಸಭೆಗೆ ಬಾರದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಿ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷಿö್ಮÃ ಚೌಧರಿ ಖಡಕ್ ಸೂಚನೆ ನೀಡಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆ ಕಾರ್ಯವೈಖರಿ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ಬಾರದ ಕಾರಣ ಕೆಂಡಾಮAಡರಾಗಿ ಇವರಿಗೆ ಕೂಡಲೇ ನೋಟ್ ನೀಡಿ. ಜಿಲ್ಲೆಯಲ್ಲಿ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪಂಚಾಯಿತಿ ಕಚೇರಿಗಳು ಜನಪರ ಕೆಲಸ ಮಾಡದೇ ದಾರಿ ತಪ್ಪಿವೆ. ಮಹಿಳೆಯರಿಗೆ ಸಿಗಬೇಕಾದ ಸೌಲಭ್ಯ ನೀಡದೆ ವಿನಾಃ ಕಾರಣ ಕಾಲ ಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಳ್ಳಿಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕುಡುಕರ ಅಡ್ಡೆಗಳಾಗಿವೆ. ಜಿಲ್ಲೆಯಲ್ಲಿನ ಬಹುತೇಕ ಪಿಡಿಒಗಳು ಜನರ ಕೆಲಸ ಮಾಡುತ್ತಿಲ್ಲ. ವಸತಿ ನಿಲಯಗಳಲ್ಲಿ ಮಹಿಳಾ ವಿದ್ಯಾರ್ಥಿನಿಯರಿಗೆ ಯಾವುದೇ ರP್ಷÀಣೆ ಇಲ್ಲ. ನರೇಗಾದಲ್ಲಿ ಮಹಿಳೆಯರಿಗೆ ಕೆಲಸ ನೀಡುತ್ತಿಲ್ಲ. ವಿವಿಧ ಮಹಿಳೆಯರಿಗೆ, ಅಂಗವಿಕಲ ಹೆಣ್ಣು ಮಕ್ಕಳಿಗೆ ಮಾಸಾಶನ ಸಿಗುತ್ತಿಲ್ಲ. ಅಲೆಮಾರಿ ಜನಾಂಗದವರು ವಾಸ ಮಾಡುವ ಊರುಗಳಲ್ಲಿನ ಏರಿಯಾಗಳು ಹಾಳೂರು ಕೊಂಪೆಯಾಗಿದ್ದರು ಇಲ್ಲಿನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಏರು ಧ್ವನಿಯಲ್ಲಿಯೇ ಪ್ರಶ್ನಿಸಿದರು. ಇದನ್ನು ಕಂಡು ಜಿಪಂ ಸಿಇಒ ಹಾಗೂ ಹೆಚ್ಚುವರಿ ಡಿಸಿ ಗಾಬರಿಯಾಗಿ ಮಾತೇ ಬಾರದಂತೆ ಕೈಕಟ್ಟಿ ಕುಳಿತ ಘಟನೆ ನಿರ್ಮಾಣವಾಯಿತು.
ಜಿಲ್ಲೆಯಲ್ಲಿನ ಈ ಎಲ್ಲ ಸಮಸ್ಯೆಯನ್ನು ಮೂರು ತಿಂಗಳ ಒಳಗಾಗಿ ಬಗೆ ಹರಿಯಬೇಕು. ಯಾದಗಿರಿ ರಕ್ತನಿಧಿ ಆರಂಭಕ್ಕಿರುವ ಅಡಚಣೆ ಕೂಡಲೇ ನಿವಾರಣೆ ಮಾಡಬೇಕು. ಇಲ್ಲವಾದರೆ ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಪಂ ಸಿಇಒ ಲವೀಶ್ ಓರ್ಡಿಯಾ, ಎಸ್‌ಪಿ ಸಂಗೀತಾ, ಹೆಚ್ಚುವರಿ ಡಿಸಿ ಶರಣಬಸಪ್ಪ ಕೋಟೆಪ್ಪಗೊಳ, ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ವೀರಣ್ಣ ಗೌಡ ಪಾಟೀಲ್, ಸಿಪಿಐ ಸುನೀಲ್ ಮೂಲಿಮನಿ ಇತರರಿದ್ದರು.
ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ ಚೌಧರಿ: ಜಿ¯್ಲೆಯ ಮಹಿಳೆಯರ ಸ್ಥಿತಿ ಅತ್ಯಂತ ಶೋಚನಿಯವಾಗಿದೆ. ಉಪವಾಸ, ವನವಾಸದಲ್ಲಿ ಮಕ್ಕಳು ಕುಟುಂಬದೊAದಿಗೆ ಬದುಕು ದೂಡುತ್ತಿದ್ದಾರೆ. ಅಲೆಮಾರಿ ಜನಾಂಗದವರ ಸ್ಥಿತಿಯಂತೂ ದೇವರೇ ಬಲ್ಲ. ಇವರ ಉದ್ಧಾರಕ್ಕಾಗಿ ಸರ್ಕಾರ ಜಾರಿ ಮಾಡಿದ ಯೋಜನೆಗಳು, ಅನುದಾನ ಎಲ್ಲಿ ಮಾಯವಾಯಿತು. ಅಧಿಕಾರಿಗಳು ಕೆಲಸ ಮಾಡಲು ಬಂದಿದ್ದಿರೋ, ಏನು ಸುಮ್ಮನ್ನೆ ಕಾಲ ಹರಣ ಮಾಡಿ ಸಂಬಳ ಪಡೆಯಲು ಬಂದಿದ್ದಿರೋ ಎಂದು ಅಧಿಕಾರಿಗಳಿಗೆ ಬೆವರು ಇಳಿಸಿ, ಜಿ¯್ಲÁಡಳಿತಕ್ಕೆ ಭಾರಿ ಬಿಸಿ ಮುಟ್ಟಿಸಿದರು.
ಜಿಲ್ಲೆಯ ಸಮಸ್ಯೆ ಕುರಿತು ಸರ್ಕಾರಕ್ಕೆ ವರದಿ ಶೀಘ್ರ: ಜಿಲ್ಲೆಯ ಮಹಿಳೆಯರ ಸಮಸ್ಯೆ ಮತ್ತು ಅವರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳ ಕೊರತೆಗಳ ಪಟ್ಟಿ ಮಾಡಿ ಅದರ ಸಮಗ್ರ ವರದಿ ಮುಖ್ಯಮಂತ್ರಿ ಸೇರಿ ಆಯಾ ಇಲಾಖೆ ಸಚಿವ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸುವ ಮೂಲಕ ಅಗತ್ಯ ಕ್ರಮಕ್ಕೆ ಮನವಿ ಮಾಡಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷಿö್ಮÃ ಚೌಧರಿ ಹೇಳಿದರು.
ಜಿಪಂ ಸಭಾಂಗಣದಲ್ಲಿ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆ ಸಮಸ್ಯೆಗಳ ತವರೂರಾಗದೆ. ಇಲ್ಲಿನ ಮಹಿಳೆಯ ಸ್ಥಿತಿ ಬಹುತೇಕ ಹಂತಗಳಲ್ಲಿ ಶೋಚನೀಯವಾಗಿದೆ. ಹಿರಿಯ ಅಧಿಕಾರಿಗಳು ತಮ್ಮ ಕೆಳಹಂತದ ಅಧಿಕಾರಿಗಳಿಂದ ಕೆಲಸ ಮಾಡಿಸಿ ಅದರ ಸಾಧಕ, ಬಾಧಕ ಕೇಳಿದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದರು. ಮುಂದಿನ ಮೂರು ತಿಂಗಳಲ್ಲಿ ಜಿಲ್ಲೆಯ ಬಡ ಮಹಿಳೆಯರ ಸಮಸ್ಯೆಗೆ ಮುಕ್ತಿ ಸಿಗಬೇಕು. ಉದ್ಯೋಗ ದೊರೆಯಬೇಕು. ಕನಿಷ್ಟ ಮೂಲಭೂತ ಸೌಲಭ್ಯ ಅವರಿದ್ದಲ್ಲಿಗೆ ಸಿಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿರುವುದಾಗಿ ಹೇಳಿದರು.
ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಕೆಕೆಆರ್‌ಡಿಬಿಗೆ ಸರ್ಕಾರ ನೀಡುವ 5 ಸಾವಿರ ರೂ.ಕೋಟಿ ಹಣದಲ್ಲಿ ವಿಶೇಷ ಪಾಕೇಜ್ ಮೂಲಕ ಹೆಚ್ಚಿನ ಅನುದಾನ ಪಡೆದು ಮಹಿಳೆಯ ಸಬಲೀಕರಣಕ್ಕೆ ಉಪಯೋಗಿಸುವ ಮೂಲಕ ಜಿಲ್ಲೆಯ ಮಹಿಳೆಯರು ಗುಳೆ ಹೋಗುವುದನ್ನು ತಪ್ಪಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸೋಮವಾರದಿAದ ಮೂರು ದಿನಗಳವರೆಗೆ ಜಿಲ್ಲೆಯ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲೂಕಿಗಳ ವಿವಿಧ ವಸತಿ ನಿಲಯ, ಆಸ್ಪತ್ರೆ, ಅಂಗನವಾಡಿ ಕೇಂದ್ರ, ಅಲೆಮಾರಿ, ಅರೆಅಲೆಮಾರಿ ಜನಾಂಗದವರು ವಾಸಿಸುವ ಏರಿಯಾಗಳಿಗೆ ಭೇಟಿ ನೀಡಿ, ಅಲ್ಲಿನ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆ ಮತ್ತು ಸೌಲಭ್ಯಗಳಿಲ್ಲದೆ ಕಷ್ಟಕ್ಕೆ ಸಿಲುಕಿರುವ ಕುರಿತು ಮಾಹಿತಿ ಸಂಗ್ರಹಿಸಿ, ಸಭೆಯಲ್ಲಿ ಎಲ್ಲವನ್ನೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮೂರು ತಿಂಗಳ ಒಳಗೆ ಈ ಎಲ್ಲ ಸಮಸ್ಯೆ ಬಗೆಹರಿಯಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ ಸ್ಪಷ್ಟಪಡಿಸಿದರು.