ಗೈರಾಣ ಜಮೀನು ಸಕ್ರಮಗೊಳಿಸಿ ರೈತರಿಗೆ ನೀಡಿ

30-6jvg01.
Published on

ಜೇವರ್ಗಿ : ಕಳೆದ ಹಲವಾರು ವರ್ಷಗಳಿಂದ ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಬಂದಿರುವ ಗೈರಾಣ ಜಮೀನು ಸಕ್ರಮಗೊಳಿಸಿ ರೈತರ ಹೆಸರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ತಹಸೀಲ್ದಾರ್ ಸಿದ್ದರಾಯ ಭೋಸಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಭೂ ಮಂಜುರಾತಿ ಸಮಿತಿಗಳನ್ನು ತಕ್ಷಣ ನೇಮಕ ಮಾಡಬೇಕು. ಎಲ್ಲ ಸಮೂದಾಯದ ಬಡವರಿಗೆ, ಸೂರಿಲ್ಲದವರಿಗೆ ಮನೆ ಮಂಜೂರು ಮಾಡಿಕೊಡವೇಕು. 2018- 20ರವರೆಗೆ ಜಿಪಿಎಸ್ ಆಗಿರುವ ಮನೆಗಳಿಗೆ ತಕ್ಷಣ ಹಣ ಬಿಡುಗಡೆಗೊಳಿಸಬೇಕು. ಸಹಕಾರಿ ಸಂಘದಿಂದ ರೈತರು ತೆಗೆದುಕೊಂಡ ಅಲ್ಪಾವಧಿ ಮತ್ತು ದೀಘರ್ಾವಧಿ ಸಾಲದ ಅಸಲು ಕಟ್ಟಲು ಹೆಚ್ಚಿನ ಕಾಲಾವಕಾಶ ನೀಡಬೇಕು. ಪೌರ ಕಾಮರ್ಿಕರಿಗೆ ಪ್ರತಿ ತಿಂಗಳು ವೇತನ ಪಾವತಿಸಬೇಕು. ಜೇವರ್ಗಿಯಲ್ಲಿ ಸಾರ್ವಜನಿಕ ಉದ್ಯಾನವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಪುಂಡಲಿಕ ಗಾಯಕವಾಡ, ರಾಮಚಂದ್ರ ಧರೇನ್, ಶ್ರೀಶೈಲ ಬುಟ್ನಾಳ, ಗುಂಡಪ್ಪ ಜಡಗಿ, ವಿಜಯಕುಮಾರ ಧರೇನ್, ಮೌನೇಶ ಝಳಕಿ, ಶಿವಲಿಂಗ ರಾಸಣಗಿ, ಸಂಗಣ್ಣ ಐದಳ್ಳಿ, ಮಹಾದೇವ ಬುಟ್ನಾಳ, ಹಣಮಂತ ಮಂದರವಾಡ, ಬಸವರಾಜ ಮಂದರವಾಡ, ಸಂಗಣ್ಣ ಕಟ್ಟಿಸಂಗಾವಿ, ಮಲ್ಲಿನಾಥ ಹೆಗಡೆ, ಲಕ್ಷ್ಮಣ ಡೊಳ್ಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net