ಗೆಳೆಯರೆದುರು ಪ್ರಾಣಬಿಟ್ಟ ಕಡವೆ

14KWR1
Published on

ಕಾರವಾರ: ವಯಸ್ಸಾದ ಕಡವೆಯೊಂದು ತಾಲೂಕಿನ ಸಿದ್ದರ ಗ್ರಾಮಕ್ಕೆ ಬಂದು ಮೃತಪಟ್ಟಿದೆ. ಅಂದಾಜು 16 ವರ್ಷದ ಗಂಡು ಕಡವೆ ಕಳೆದ ಕೆಲ ದಿನಗಳಿಂದ ಸಿದ್ದರದ ವಸಂತ ಸೈರೋಬಾ ಸಾವಂತ ಅವರ ಮನೆಯ ದನಕರುಗಳ ಜತೆ ಸ್ನೇಹ ಬೆಳೆಸಿತ್ತು. ಅವುಗಳೊಂದಿಗೆ ಕೊಟ್ಟಿಗೆಗೆ ಬರುತ್ತಿತ್ತು. ಊರಿನವರು ಓಡಿಸಿದ ಬಳಿಕ ಕಾಡಿಗೆ ತೆರಳುತ್ತಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಭಾನುವಾರ ಆಗಮಿಸಿದ ಕಡವೆ ಕಾಡಿನತ್ತ ಓಡಿಸಿದರೂ ಓಡಲಿಲ್ಲ. ಮಂಕಾಗಿ ನಿಂತಲ್ಲೇ ನಿಂತಿತ್ತು. ಕಡವೆಗೆ ಓಡಲು ಸಾಧ್ಯವಾಗುತ್ತಿಲ್ಲ ಎಂದು ಅರಿತ ಅರಣ್ಯಾಧಿಕಾರಿಗಳು ಇದನ್ನು ನೋಡುತ್ತಿದ್ದರು. ಭಾನುವಾರ ನಿಂತಲ್ಲೇ ಬಿದ್ದು ಸಾವನ್ನಪ್ಪಿದೆ. ಅರಣ್ಯಾಧಿಕಾರಿಗಳು ಅದರ ಪಂಚನಾಮೆ ನಡೆಸಿ, ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂದು ಆರ್​ಎಫ್​ಒ ಜಿ.ವಿ. ನಾಯ್ಕ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net