ಗೆರೆಗಳಲ್ಲಿ ಅಗೋಚರ ಜಗತ್ತು ತೋರಿಸುವ ಕಲಾವಿದ:ಕೆ.ಟಿ. ಶಿವಪ್ರಸಾದ್ ಅಭಿಮತ

ಗೆರೆಗಳಲ್ಲಿ ಅಗೋಚರ ಜಗತ್ತು ತೋರಿಸುವ ಕಲಾವಿದ:ಕೆ.ಟಿ. ಶಿವಪ್ರಸಾದ್ ಅಭಿಮತ
Published on

ಹಾಸನ: ನೆನಪನ್ನು ಮರುಕಳಿಸುವ ಚಿತ್ರಕಲೆಗೆ ತನ್ನದೆಯಾದ ಇತಿಹಾಸವಿದ್ದು, ಪ್ರಸ್ತುತದಲ್ಲೂ ತನ್ನ ಗೌರವ ಉಳಿಸಿಕೊಂಡು ಬಂದಿದೆ ಎಂದು ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಹೇಳಿದರು.
ನಗರದ ಸಂಸ್ಕೃತ ಭವನದಲ್ಲಿ ಶಾಂತಲಾ ಲಲಿತಾ ಕಲಾ ಶಾಲೆ ಹಾಗೂ ಶಾಂತಲಾ ಆರ್ಟ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಲೆ ಎಂದರೆ ಹಿಂದಿನಿಂದಲೂ ತನ್ನದೆಯಾದ ಗೌರವ ಉಳಿಸಿಕೊಂಡು ಬಂದಿದೆ. ಮನುಷ್ಯ ಕಾಣದೆ ಇರುವಂತಹದನ್ನು ಚಿತ್ರಗಳ ಮೂಲಕ ತೋರಿಸಿದ್ದಾನೆ. ಪ್ರಕೃತಿ, ಪ್ರಾಣಿಗಳು, ಜನರು ವಾಸಿಸುವ ರೀತಿ ಸೇರಿದಂತೆ ಇತರೆ ವಿಚಾರಗಳನ್ನು ಚಿತ್ರ ಕಲಾವಿದ ತನ್ನ ಕೈ ಚಳಕದ ಮೂಲಕ ಗೀಚಿ ತೋರಿಸಿದ್ದಾನೆ. ಚಿತ್ರಕಲೆ ಮೂಲಕ ದೊಡ್ಡ ದೊಡ್ಡ ಕಲಾವಿದರು ನಮ್ಮ ದೇಶದಲ್ಲಿದ್ದು, ಫೈಟಿಂಗ್ ಮೂಲಕ ಪ್ರಪಂಚದ ಎಲ್ಲಾ ಆಗು- ಹೋಗುಗಳನ್ನು ತೋರಿಸುತ್ತಾನೆ ಎಂದರು.
ಫೈಂಟಿಂಗ್ ಮಾಡುವ ಜನರು ನಮ್ಮಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತದಲ್ಲಿ ದುಡಿಮೆ ಬಗ್ಗೆ ಯೋಚಿಸಿ ಚಿತ್ರಕಲೆ ಕಡೆ ಗಮನ ಕಡಿಮೆ ಆಗಿದೆ. ಯಾರಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಇದ್ದರೆ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಚಿತ್ರಕಲೆಯ ಆಸಕ್ತಿ ಮೂಡಿಸಬೇಕು. ಚಿತ್ರಕಲೆಯಲ್ಲಿ ತನ್ನದೆಯಾದ ಹೆಸರು ಮಾಡಿದವರಯ ಇದ್ದಾರೆ. ಅವರ ಸ್ಫೂರ್ತಿಯಲ್ಲಿ ಮಕ್ಕಳು ಆದರ್ಶವನ್ನು ಬೆಳೆಸಿಕೊಂಡು ಚಿತ್ರಕಲೆ ಉಳಿಸಿ ಬೆಳೆಸಲು ಮುಂದಾಗುವಂತೆ ಕರೆ ನೀಡಿದರು.
ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಮೂಡಿ ಬಂದ ಕಲಾಕೃತಿಗಳನ್ನು ಇದೆ ವೇಳೆ ಪ್ರದರ್ಶನಕ್ಕೆ ಇಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಈ ಕಲಾಕೃತಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಟೈಮ್ಸ್ ಶಿಕ್ಷಣ ಸಮೂಹ ಸಂಸ್ಥೆಯ ಮುಖ್ಯಸ್ಥ ಬಿ.ಕೆ. ಗಂಗಾಧರ್, ಲೇಖಕಿ ಸುವರ್ಣಾ ಕೆ.ಟಿ. ಶಿವಪ್ರಸಾದ್, ಕಲಾವಿದರಾದ ಸಿ.ಎಸ್. ಬಸವರಾಜು, ಆರ್. ಶಿವಕುಮಾರ್, ಎಲ್.ಜಿ. ಲತಾ, ಎಚ್.ಎನ್. ನಂದಿನಿ, ಯೋಗಾನಂದ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net