ಗೆದ್ದು ಬೀಗಿದ ಗ್ರಾಪಂ ಅಭ್ಯರ್ಥಿಗಳು

31ark1
ಅರಕಲಗೂಡಿನಲ್ಲಿ ಗುರುವಾರ ನಡೆದ ಕೊಣನೂರು ಗ್ರಾಪಂ ಚುನಾವಣೆ ಮತ ಎಣಿಕೆಯಲ್ಲಿ ವಿಜೇತರಾದ ಅಭ್ಯರ್ಥಿಗಳನ್ನು ಬೆಂಬಲಿಗರು ಅಭಿನಂದಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
Published on

ಅರಕಲಗೂಡು: ತಾಲೂಕಿನ ಕೊಣನೂರು ಗ್ರಾಮ ಪಂಚಾಯಿತಿಯ 21 ಸ್ಥಾನಗಳಿಗೆ ಹಾಗೂ ಆಲದಹಳ್ಳಿ ಗ್ರಾಪಂ ಮುಸವತ್ತೂರು ಗ್ರಾಮದ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ಮತಗಳ ಎಣಿಕೆ ಕಾರ್ಯ ಸೋಮವಾರ ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕಟ್ಟದಲ್ಲಿ ನಡೆಯಿತು. ಬೆಳಗ್ಗೆ 8 ಕ್ಕೆ ಪ್ರಾರಂಭವಾದ ಮತ ಎಣಿಕೆ ಕಾರ್ಯ ನಾಲ್ಕು ಸುತ್ತುಗಳಲ್ಲಿ ನಡೆದು ಮಧ್ಯಾಹ್ನ 1ಕ್ಕೆ ಮುಕ್ತಾಯವಾಯಿತು.

ಕೊಣನೂರು 1ನೇ ಕ್ಷೇತ್ರದಲ್ಲಿ ಸಿ.ಜಮುನಾ 219, ಶಫೀಕ್ ಅಹಮದ್ 376. ಹೊನ್ನೇಗೌಡನ ಕೊಪ್ಪಲು ಕ್ಷೇತ್ರದಲ್ಲಿ ಕೃಷ್ಣಪ್ಪ 134, ಕೊಣನೂರು 2ನೇ ಕ್ಷೇತ್ರದಲ್ಲಿ ಕೆ.ಕೆ.ನಾಗರಾಜ್ 109, ಕೊಣನೂರು ಪೇಟೆಯ ಎಸ್.ಆರ್. ಹರೀಶ್ 145, ಕೊಣನೂರು 3 ನೇ ಕ್ಷೇತ್ರದಲ್ಲಿ ಲಕ್ಷ್ಮೀ ಶ್ರೀ ನಿವಾಸ್ 194, ಕೆ.ವಿ.ಜಯಮ್ಮ 250 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಕೊಣನೂರು 4 ನೇ ಕ್ಷೇತ್ರದಲ್ಲಿ ಎನ್.ಸಿ.ಗಾಯಿತ್ರಿ 134, ಬಿ.ಮಧು 112, ಕೊಣನೂರು 5 ನೇ ಕ್ಷೇತ್ರದಲ್ಲಿ ಕಾಮಾಕ್ಷಿ 118, ಕೊಣನೂರು 6 ನೇ ಕ್ಷೇತ್ರದಲ್ಲಿ ಬಿ. ನಾಗರಾಜ್ 267, ಪಾವನಾ 317, ಕೊಣನೂರು 7 ನೇ ಕ್ಷೇತ್ರದಲ್ಲಿ ಬಿ.ಬಿ.ಆಯೇಷಾ 163, ಜಾಕೀರ್ ಹುಸೇನ್ 232, ಕೊಣನೂರು 8 ನೇ ಕ್ಷೇತ್ರದಲ್ಲಿ ಕೆ.ವಿ.ವೆಂಕಟೇಶ್ 255, ಶಿವಮ್ಮ 233 ಮತಗಳನ್ನು ಪಡೆದು ಜಯ ಸಾಧಿಸಿದರು.

ಕೊಣನೂರು 9 ನೇ ಕ್ಷೇತ್ರದಲ್ಲಿ ವಿಜ್ಬಾ 227, ಕೆ.ಎಸ್.ರಾಜು 302, ಕೊಣನೂರು 10 ನೇ ಕ್ಷೇತ್ರದಲ್ಲಿ ಕೆ.ಸಿ.ಅನುಷಾ 159, ರುಮಾನಾ ಫಾತಿಮಾ 289, ಕೆರೆಕೋಡಿ ಕ್ಷೇತ್ರದಲ್ಲಿ ಕೆ.ಆರ್.ಶಿವಣ್ಣ 205, ತಾಲೂಕಿನ ಆಲದಹಳ್ಳಿ ಗ್ರಾಪಂನ ಮುಸವತ್ತೂರು ಕ್ಷೇತ್ರದಿಂದ ಲಕ್ಷ್ಮಮ್ಮ 271 ಮತಗಳನ್ನು ಪಡೆದು ಚುನಾಯಿತರಾದರು. ಮಲ್ಲಿಪಟ್ಟಣ ಗ್ರಾಪಂ ಶಿರದನಹಳ್ಳಿ ಕ್ಷೇತ್ರದಿಂದ ಕಾಂತರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net