ಗೆದ್ದಲಮರಿಯಲ್ಲಿ ಮದುವೆ ಸಂಭ್ರಮ

ydg1
Published on

ಕೊಡೇಕಲ್: ಶ್ರಾವಣ ಮಾಸ ನಿಮಿತ್ತ ಗೆದ್ದಲಮರಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣದಲ್ಲಿ ನಡೆದ ಮದುವೆ ಸನ್ನಿವೇಶಕ್ಕೆ ಶುಕ್ರವಾರ ಇಡೀ ಗ್ರಾಮವೇ ಸಾಕ್ಷಿ ಆಯಿತು.

ಮದುವೆ ನಿಮಿತ್ತ ಬೆಳಗ್ಗೆಯಿಂದಲೇ ಸಡಗರ ಕಂಡು ಬಂದಿತು. ತಳಿರು ತೋರಣಗಳಿಂದ ಸಿಂಗಾರಗೊAಡ ದೇವಸ್ಥಾನದಲ್ಲಿ ಸಂಜೆ ಪುರಾಣದಲ್ಲಿ ನಡೆದ ಮದುವೆ ಕರ‍್ಯಕ್ರಮಕ್ಕೆ ಗೆದ್ದಲಮರಿ ಸೇರಿ ಸುತ್ತಿಲಿನ ಗ್ರಾಮಸ್ಥರು ಆಗಮಿಸಿದ್ದು ವಿಶೇಷವಾಗಿತ್ತು.

ಶ್ರೀ ಶರಣಬಸವೇಶ್ವರ ಮತ್ತು ಮಾದಮ್ಮ ತಾಯಿಯ ವಿವಾಹ ಪ್ರಸಂಗದಲ್ಲಿ ಗ್ರಾಮದ ಈರಯ್ಯ ಸಾರವಾಡ ಹೆಣ್ಣಿನ ಕಡೆಯವರಾಗಿ ಮದುಮಗಳಾದ ಮಾತೆ ಮಾದಮ್ಮಳನ್ನು ವೈಭವದ ಮೆರವಣಿಗೆ ಮೂಲಕ ಮಂಟಪಕ್ಕೆ ಆಗಮಿಸಿ ಗಂಡಿನ ಕಡೆಯವರಾದ ಶಿವರಾಜ ಹೊಕ್ರಾಣಿ ಹಾಗೂ ಮದುಮಗನನ್ನು ಸ್ವಾಗತಿಸಿಒಕೊಂಡು ವರೋಪಚಾರ ನಡೆಸಿದರು.

ವಿಶೇಷವಾಗಿ ಅಲಂಕರಿಸಲಾಗಿದ್ದ ಶರಣಬಸವೇಶ್ವರ ಮತ್ತು ಮಾದಮ್ಮ ಇವರ ಹೆಸರುಗಳನ್ನಿಟ್ಟ ಗೊಂಬೆಗಳಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿ ನಂತರ ವರೋಪಚಾರ ಸೇರಿ ಎಲ್ಲ ಶಾಸ್ತç ನೆರವೇರಿಸಿದ ನಂತರ ವೀರಯ್ಯ ಹಿರೇಮಠ ಅವರ ಪೌರೋಹಿತ್ಯದಲ್ಲಿ ಎರಡು ಗೊಂಬೆಗಳನ್ನು ದೇವರ ಸ್ವರೂಪ ಎಂದು ಭಾವಿಸಿ ಮಂತ್ರ ಪಟಣದೊಂದಿಗೆ ಮದುವೆ ಕರ‍್ಯ ನೆರವೇರಿಸಲಾಯಿತು. ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಮದುಮಕ್ಕಳಿಗೆ ಅಕ್ಷತೆ ಹಾಕಿದರು. ಪುರಾಣಿಕ ಅದೃಶ್ಯಾನಂದ ಶಾಸ್ತಿç ಮಾತನಾಡಿದರು.

ಮೈಪಾಲ್ ರೆಡ್ಡಿ ಸಾಹುಕಾರ, ಶಿವರಾಜ ಹೋಕ್ರಾಣಿ, ರುದ್ರು ಕುಂಬಾರ, ಶಿವರಾಜ ಅಂಗಡಿ, ಸೋಮನಗೌಡ ಬಿರಾದಾರ, ನಿಂಗಣ್ಣ ಬಿರಾದಾರ, ನಿಂಗಪ್ಪ ಕುರಿ, ನಾಗರಾಜ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net