ಗೆಜೆಟೆಡ್ ಪ್ರೊಬೆಷನರ್ಸ್ ಮರು ಸ್ಪರ್ಧಾತ್ಮಕ ಪರೀಕ್ಷೆ ಸುಗಮ

CTD GEJETED PROBESHNERS ----.
Published on

ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ಜಿಲ್ಲೆಯಲ್ಲಿ ಜರುಗಿದ ಗೆಜೆಟೆಡ್ ಪ್ರೊಬೆಷನರ್ಸ್ ಮರು ಸ್ಪರ್ಧಾತ್ಮಕ ಪರೀಕ್ಷೆ ಸುಗಮವಾಗಿ ನಡೆಯಿತು. ಪರೀಕ್ಷೆಗೆ ನಗರದಲ್ಲಿ 25 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. 8170 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು.

ಬೆಳಗ್ಗೆ ಪತ್ರಿಕೆ-1ರ ಪರೀಕ್ಷೆಗೆ 3736 ಅಭ್ಯರ್ಥಿಗಳು ಹಾಜರಾದರೆ, 4434 ಅಭ್ಯರ್ಥಿಗಳು ಗೈರಾದರು. ಮಧ್ಯಾಹ್ನ ನಡೆದ ಪತ್ರಿಕೆ-2ರ ಪರೀಕ್ಷೆಗೆ 3704 ಅಭ್ಯರ್ಥಿಗಳು ಹಾಜರಾದರೆ 4466 ಅಭ್ಯರ್ಥಿಗಳು ಗೈರಾಗಿದ್ದರು. ಪರೀಕ್ಷೆ ಅತ್ಯಂತ ಸುಗಮವಾಗಿ ನಡೆದಿದೆ ಎಂದು ಡಿಸಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net