ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಉಪ್ಪಾರ ಮೋಳೆ ಬಡಾವಣೆಯ ನಿವಾಸಿ ಗೃಹಿಣಿಯೊಬ್ಬರು ನಾಪತ್ತೆಯಾಗಿದ್ದಾರೆ.
ಬಡಾವಣೆಯ ಮಹದೇವಸ್ವಾಮಿ ಪತ್ನಿ ಸೌಮ್ಯಾ (24) ಕಾಣೆಯಾದವರು. ಇವರು ಕಳೆದ ಒಂದು ವರ್ಷದಿಂದ ತನ್ನ ತಾಯಿ ಮನೆಯಲ್ಲಿ ವಾಸವಿದ್ದರು. ನ.3ರಂದು ಮನೆಯಿಂದ ಹೊರ ಹೋದವರು ಇದುವರೆಗೂ ವಾಪಸ್ ಬಾರದ ಹಿನ್ನೆಲೆಯಲ್ಲಿ ತಡವಾಗಿ ಠಾಣೆಗೆ ಬಂದು ಇವರ ತಂದೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಗೃಹಿಣಿ ಪತ್ತೆಗೆ ಪೊಲೀಸರು ಕ್ರಮವಹಿಸಿದ್ದಾರೆ.