ಗೃಹಿಣಿ ಆತ್ಮಹತ್ಯೆ

63240192
Published on

ಕೊಳ್ಳೇಗಾಲ: ಕೆಲಸಕ್ಕೆ ಹೋಗದ ಪತಿಯ ವರ್ತನೆಯಿಂದ ಬೇಸತ್ತು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮುಡಿಗುಂಡ ಬಡಾವಣೆಯ ಮಹಮ್ಮದ್ ರಿಯಾಜ್ ಪತ್ನಿ ಉಮ್ಮೇಜೈಬಾ(22) ಮೃತಪಟ್ಟವರು.

ಈಕೆಯ ಗಂಡ ಕೆಲಸಕ್ಕೆ ಹೋಗದೆ ಕಾಲ ಕಳೆಯುತ್ತಾನೆಂದು ಬೇಸತ್ತಿದ್ದ ಗೃಹಿಣಿ ಬುಧವಾರ ನೇಣು ಬಿಗಿದುಕೊಂಡಿದ್ದಾಳೆ. ಇದನ್ನು ನೋಡಿದ ಮನೆಯವರು ತಕ್ಷಣ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದರೆನ್ನಲಾಗಿದೆ.

ಈ ಸಂಬಂಧ ಮೃತಳ ತಂದೆ ಪೊಲೀಸರಿಗೆ ಮಾಹಿತಿ ನೀಡಿದರು. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಸರ್ಕಾರಿ ವೈದ್ಯರಿಂದ ಶವಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net