ಗೃಹಲಕ್ಷ್ಮೀ,ಪರಿಣಾಮಕಾರಿ ಅನುಷ್ಠಾನಕ್ಕೆ ಸಿಇಒ ತಾಕೀತು

CTD 23 ceo--07
Published on


ಚಿತ್ರದುರ್ಗ: ಗೃಹಲಕ್ಷ್ಮೀ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಪಂ ಸಿಇಒ ಎಸ್.ಜೆ.ಸೋಮಶೇಖ ರ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಪಂದಲ್ಲಿ ಬುಧವಾರ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ತಾಪಂ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಅವರು ಈ ಸೂಚನೆ ನೀಡಿದರು.
ಕುಟುಂಬದ ಯಜಮಾನಿ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ.ಜಮಾ ಆಗುವ ಈ ಯೋಜನೆಗೆ ಆ.30ರಂದು ಮೈಸೂರಿನಲ್ಲಿ ಸಿ ಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಗ್ರಾಪಂಗಳಲ್ಲಿ ಕಾರ‌್ಯಕ್ರಮದ ನೇರ ಪ್ರಸಾರದ ವೀಕ್ಷಣೆಗಾಗಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳ ಬೇಕೆಂ ದರು.
ಕುಟುಂಬದ ಯಜಮಾನಿ ಅಥವಾ ಆಕೆಯ ಗಂಡ ತೆರಿಗೆ ಪಾವತಿದಾರರಾಗಿದ್ದರೆ ಯೋಜನೆ ಲಾಭ ದೊರೆಯದು. ಅರ್ಹ ಫಲಾ ನುಭವಿಗಳು ಗ್ರಾಪಂ ಕಚೇರಿ,ಕರ್ನಾಟಕ ಒನ್,ಗ್ರಾಮ ಒನ್‌ನಲ್ಲಿ ನೋಂದಾಯಿಸಬಹುದು. ಗ್ರಾಮದ ಪ್ರಜಾಪ್ರತಿನಿಧಿಗ ಸಹಾಯ ದಿಂದಲೂ ನೋಂದಾಯಿಸಿ ಕೊಳ್ಳಬಹುದಾಗಿದೆ. ಜಿಲ್ಲೆಯ 3,33172 ಗ್ರಾಮೀಣ ಫಲಾನುಭವಿಗಳ ಪೈಕಿ,38999 ನೋಂದಣಿ ಬಾಕಿ ಇದೆ.
ಶಾಲಾಆವರಣ ಹೊರತುಪಡಿಸಿ,ಸಮುದಾಯ ಭವನ,ಕಲ್ಯಾಣ ಮಂಟಪ ಇತ್ಯಾದಿಗಳೆಡೆ ಟಿವಿ,ಎಲ್‌ಇಡಿ ಪರದೆ ಮೂಲಕ ಕಾರ‌್ಯ ಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳ ಬೇಕು,ಇದಕ್ಕಾಗಿ ಅಗತ್ಯವಿರುವ ಇಂಟರ್‌ನೆಟ್ ಸಂಪರ್ಕವನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅಂದಿನ ರಾಜ್ಯಮಟ್ಟದ ಕಾರ‌್ಯಕ್ರಮ ಸಂದರ್ಭದಲ್ಲಿ ಮುಖ್ಯಮಂತ್ರಿ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಸಾಧ್ಯತೆಗಳಿದ್ದು, ಇದಕ್ಕಾಗಿ ಜಿಲ್ಲೆ ಆಯ್ದ 3 ಗ್ರಾಪಂಗಳಲ್ಲಿ ಮಹಿಳಾ ಫಲಾನುಭವಿಗಳನ್ನು ಗುರುತಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಅವರಿಗೆ ಸೂಚಿಸಿದರು.
(ಸಿಟಿಡಿ 23 ಸಿಎಒ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net