ಗೃಹಲಕ್ಷ್ಮೀಗೆ ಯಾವುದೇ ಶುಲ್ಕ ಇಲ್ಲ

20-GPT-2 (1)
ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಅಧ್ಯಕ್ಷೆ ತಾಯಮಣಿ ಮಲ್ಲು ಉದ್ಘಾಟಿಸಿದರು. ಶ್ರೀಶೈಲ ಯಮನಪ್ಪ ತಳವಾರ್, ಶ್ರೀಕಂಠರಾಜೇ ಅರಸ್, ಪಿನ್ನಮ್ಮ ಇದ್ದಾರೆ.
Published on

ಗುಂಡ್ಲುಪೇಟೆ: ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯಲು ಹಾಗೂ ಅರ್ಜಿ ಸಲ್ಲಿಸಲು ಯಾವುದೇ ತರಹದ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ತಹಸೀಲ್ದಾರ್ ಶ್ರೀಶೈಲಾಯಮನಪ್ಪ ತಳವಾರ್ ಹೇಳಿದರು.

ತಾಲೂಕಿನ ಬನ್ನಿತಾಳಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತುಪ್ಪೂರು ಗ್ರಾಮದಲ್ಲಿ ಗುರುವಾರ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಯಾವುದೇ ತರಹದ ಶುಲ್ಕ ಪಾವತಿಸಬೇಕಾಗಿಲ್ಲ. ತಮ್ಮ ಮೊಬೈಲ್ ಫೋನಿಗೆ ಸಂದೇಶ ಬಂದ ನಂತರ ಆ ದಿನದಂದು ಗ್ರಾಮ ಒನ್ ಕಚೇರಿಗೆ ಭೇಟಿ ನೀಡಬೇಕಾಗಿದೆ. ಎಸ್‌ಎಂಎಸ್ ಬರದಿದ್ದಲ್ಲಿ ಸಹಾಯವಾಣಿ ನಂಬರ್‌ಗೆ ಕರೆ ಮಾಡಬಹುದು. ಒಂದು ದಿನಕ್ಕೆ 60 ಜನಕ್ಕೆ ಎಸ್‌ಎಂಎಸ್ ಬರುತ್ತದೆ. ಆಯಾ ದಿನ ಹೋಗಿ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಬನ್ನಿತಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಯಮಣಿ ಮಲ್ಲು, ಸದಸ್ಯರಾದ ಪಿನ್ನಮ್ಮ ರಂಗಸ್ವಾಮಿ, ನಿಂಗರಾಜು, ತಾಲೂಕು ಪಂಚಾಯಿತಿ ಇಒ ಶ್ರೀಕಂಠರಾಜೇ ಅರಸ್, ಪಿಡಿಒ ಕೆ.ಎನ್.ಶಿವಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಹೇಮಾವತಿ, ಅಂಗನವಾಡಿ ಕಾರ್ಯಕರ್ತರಾದ ನಿರ್ಮಲಾ, ಉಮಾ, ಗಂಗಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net