ಗೃಹಲಕ್ಷ್ಮೀಗಾಗಿ ಮಳೆಯಲ್ಲಿ ನಿಂತ ನಾರಿಯರು

Nari stood in the rain for Grilahakshmi
ಹೊರ್ತಿ ಗ್ರಾಮದ ಕೆನರಾ ಬ್ಯಾಂಕ್ ಎದುರಿಗೆ ಲಿಂಕ್ ಪಡೆಯಲು ಮಹಿಳೆಯರು ಸರತಿಯಲ್ಲಿ ನಿಂತಿರುವುದು.
Published on

ಹೊರ್ತಿ: ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಮನೆ ಯಜಮಾನಿಗೆ ತಿಂಗಳಿಗೆ 2ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆ ಮೂಲಕ ಪಡೆಯಲು ಆಧಾರ್‌ಕಾರ್ಡ್ ಬ್ಯಾಂಕ್ ಪಾಸಬುಕ್ ಲಿಂಕ್ ಪಡೆಯುವುದು ಕಡ್ಡಾಯವಾಗಿದೆ. ಇದಕ್ಕಾಗಿ ಮಹಿಳೆಯರು ಬ್ಯಾಂಕ್ ಎದುರು ಮಳೆಯನ್ನು ಲೆಕ್ಕಿಸದೇ ಸರದಿಯಲ್ಲಿ ನಿಲ್ಲುವಂತಾಗಿದೆ.

ಗ್ರಾಮದ ಕೆನರಾ ಬ್ಯಾಂಕ್ ಎದುರಿಗೆ ಮಹಿಳೆಯರು ಗುರುವಾರ ಬೆಳಗ್ಗೆಯಿಂದಲೇ ಸರತಿಯಲ್ಲಿ ತಮ್ಮ ದಾಖಲೆಯೊಂದಿಗೆ ಮಳೆಯಲ್ಲಿ ತೋಯಿಸಿಕೊಳ್ಳುತ್ತಾ ನಿಲ್ಲುವಂತಾಗಿದೆ.

ಸರ್ಕಾರದ ಯೋಜನೆ ಪಡೆಯಲು ಮಹಿಳೆಯರು ಉತ್ಸುಕರಾಗಿದ್ದು, ಸರ್ವರ್ ಇಲ್ಲದಿದ್ದರೂ ಸರತಿಯನ್ನು ಬಿಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಆಶ್ವಾಸನೆ ನೀಡಿದಂತೆ ನಾವು ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆಯುತ್ತೇವೆ ಎಂದು ಮಹಿಳೆಯರು ಸರತಿಯಲ್ಲಿ ನಿಂತು ಹೇಳುತ್ತಿದ್ದಾರೆ.

ದೇಶದಲ್ಲಿಯೇ ಗೃಹಲಕ್ಷ್ಮೀ ಯೋಜನೆ ಪ್ರಥಮವಾಗಿದ್ದು, ಎಲ್ಲ ಮಹಿಳೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಈ ಯೋಜನೆ ಉಪಯುಕ್ತವಾಗಿದೆ. ಸರ್ವರ್ ಹೋದರೂ ಮಳೆಯಲ್ಲಿಯೇ ನಿಂತು ಲಿಂಕ್ ಪಡೆಯುತ್ತಿದ್ದಾರೆ. ಎಲ್ಲರೂ ಇದರ ಸದುಪಯೋಗ ಪಡೆಯಲಿ
ಶರಣಬಸು ಡೊಣಗಿ, ಸ್ಥಳೀಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net