ಗೃಹಲಕ್ಷಿಯಿಂದ ಸ್ತ್ರೀಯರ ಆರ್ಥಿಕ ಸಬಲತೆ -ಶಾಸಕ ಬಸವಂತಪ್ಪ, -ಮಾಯಕೊಂಡದಲ್ಲಿ ಯೋಜನೆಗೆ ಚಾಲನೆ

IMG-20230830-WA0029.jpg
Published on

ದಾವಣಗೆರೆ: ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ತಲಾ 2೦೦೦ ರೂ. ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿ ಬಡ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಉತ್ತಮ ಮಾರ್ಗವಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ತಾಲೂಕಿನ ಮಾಯಕೊಂಡ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಇಂದು ಮಹಿಳೆಯರಿಗೆ ಅದೃಷ್ಟದ ದಿನ. ಮೈಸೂರಿನಲ್ಲಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಯೋಜನೆಗೆ ಚಾಲನೆ ನೀಡಿದ್ದಾರೆ. ರಾಜ್ಯದ ತಾಯಂದಿಯರಿಗೆ ಸೌಲಭ್ಯ ಸಿಗಲಿದೆ ಎಂದ ಅವರು ಸರ್ಕಾರ, ಇಲಾಖೆ ಸಚಿವರಿಗೆ ಶುಭ ಹಾರೈಸಿದರು.

ಯೋಜನೆಗೆ ನೋಂದಾಯಿಸಿರುವ ಎಲ್ಲಾ ಮಹಿಳೆಯರಿಗೆ ಹಣವನ್ನು ಅವರ ಖಾತೆಗೆ ಜಮೆ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಮಹಿಳೆಯರಿಂದ ದೂರು ಬರದಂತೆ ಗಮನ ನೀಡಬೇಕೆಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಇಒ ರಾಮಭೋವಿ, ಉಪತಹಸೀಲ್ದಾರ್ ಹಾಲೇಶಪ್ಪ, ಸಿಡಿಪಿಒ ಶಶಿಕುಮಾರ್, ಗ್ರಾಪಂ ಅಧ್ಯಕ್ಷೆ ಶಿವಮ್ಮ ಮಲ್ಲಿಕಪ್ಪ, ಪಿಡಿಒ ನಾಗರಾಜ್, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಹನುಮಂತಪ್ಪ, ಗೋಪಾಲ್, ರುದ್ರೇಶ್, ಗ್ರಾಪಂ ಸದಸ್ಯರು, ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net