ಗೂಳಬಾಯಿ ಸರ್ಕಾರಿ ಶಾಲೆಗೆ ನೆರವು

IMG_20230809_124803
ತಲಕಾಡು ಸಿದ್ದಮ್ಮ ರಂಗನಾಯಕ, ಚಾಮನಾಯಕ ಕುಟುಂಬದ ಸದಸ್ಯರು ತಲಕಾಡಿನ ಗೂಳಬಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್, ಲ್ಯಾಪ್‌ಟಾಪ್, ಕ್ರೀಡೆ ಹಾಗೂ ಲೇಖನ ಸಾಮಗ್ರಿ ನೀಡಿದರು. ಟಿ.ಆರ್.ಸುಧಾಮಣಿ, ಟಿ.ಆರ್.ಸ್ವಾಮಿ, ಎಸ್.ಎನ್.ಗಾಯಿತ್ರಿ ಇತರರು ಇದ್ದರು.
Published on

ತಲಕಾಡು: ಸಿದ್ದಮ್ಮ ರಂಗನಾಯಕ ಹಾಗೂ ಚಾಮನಾಯಕ ಕುಟುಂಬದವರ ಸ್ಮರಣಾರ್ಥ ಇಲ್ಲಿನ ಗೂಳಬಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್, ಲ್ಯಾಪ್‌ಟಾಪ್, ಕ್ರೀಡೆ ಹಾಗೂ ಲೇಖನ ಸಾಮಗ್ರಿಗಳನ್ನು ಬುಧವಾರ ಕೊಡುಗೆ ನೀಡಲಾಯಿತು.

ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕ ಟಿ.ಆರ್. ಸ್ವಾಮಿ ಮಾತನಾಡಿ, ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಸಿದ್ದಮ್ಮ ರಂಗನಾಯಕ, ಚಾಮನಾಯಕ ಕುಟುಂಬದ ಸದಸ್ಯರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಸ್ಥಳೀಯ ಜನಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ಶಾಲೆಯಲ್ಲಿ ಓದಿದ ಸ್ಮರಣಾರ್ಥ ಕುಟುಂಬದ ಸದಸ್ಯರು ಒಗ್ಗೂಡಿ ಕೊಡುಗೆ ನೀಡಿದ್ದಾರೆ ಎಂದರು.

ಮುಖ್ಯಶಿಕ್ಷಕಿ ಎಸ್.ಎನ್.ಗಾಯಿತ್ರಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿರುವ ಸ್ವಾಮಿ, ರಂಗನಾಯಕ ಹಾಗೂ ಚಾಮನಾಯಕ ಕುಟುಂಬದ ಸದಸ್ಯರು, ಇಲ್ಲಿನ ಗೂಳಬಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಆರ್. ಚಾಮಪ್ಪ, ಟಿ.ಆರ್.ನಾರಾಯಣ, ಟಿ.ಆರ್.ಜಯರಾಮು, ಟಿ.ಆರ್.ರಂಗಸ್ವಾಮಿ, ಟಿ.ಆರ್.ಲೋಕೇಶ್, ಟಿ.ಆರ್.ಸ್ವಾಮಿ, ಜಿ.ಪಂ.ಮಾಜಿ ಸದಸ್ಯೆ ಟಿ.ಆರ್.ಸುಧಾಮಣಿ, ಟಿ.ಆರ್.ಮಾಲಾ, ಮುಖ್ಯಶಿಕ್ಷಕಿ ಎಸ್.ಎನ್.ಗಾಯಿತ್ರಿ, ಸಹಶಿಕ್ಷಕ, ತಾಪಂ ಮಾಜಿ ಸದಸ್ಯ ನರಸಿಂಹ ಮಾದನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net