

ಜಿಲ್ಲೆಯ ಎಚ್.ಡಿ.ಕೋಟೆ ರಸ್ತೆಯ ಗುಜ್ಜೆಗೌಡನಪುರ ಬಳಿ ಶನಿವಾರ ಗೂಡ್ಸ್ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ 12 ಜನ ಗಾಯಗೊಂಡಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನಿನ ವಿವಿಧ ಗ್ರಾಮಗಳಿಂದ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿರು ಬಸವ ಜಯಂತಿಗೆ ಆಗಮಿಸುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ.
ತಾಲೂಕಿನ ಕಾರೇಹುಂಡಿ ಗ್ರಾಮದ ನಾಗೇಶ್ ಪುತ್ರ ತೇಜಸ್ (13), ಕಟ್ಟೆಮನುಗನಹಳ್ಳಿ ಗ್ರಾಮದ ಕೆಂಡಗಣ್ಣಸ್ವಾಮಿ ಪುತ್ರ ಮಹದೇವಸ್ವಾಮಿ(20), ಭದ್ರಪ್ಪನವರ ಮಕ್ಕಳಾದ ನಿತೇಶ್ (15), ನಿಖಿಲ್ (15), ಸ್ವಾಮಪ್ಪನವರ ಪುತ್ರ ಆದರ್ಶ(16) ತೀವ್ರಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹದೇವಪ್ಪ (60) ಗುರುಪ್ರಸಾದ್(24) ಮಹದೇವಸ್ವಾಮಿ (25) ಮನೋಜ್(20) ವಿವೇಕ್ (22) ಶರತ್ (18) ಮಹಾಂತೇಶ್ (18) ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಕಾರ್ಯಕ್ರಮಗಳಲ್ಲಿ ಬಳಸಲಾಗುವ ಪೇಪರ್ ಬ್ಲಾಸ್ಟರ್ ಯಂತ್ರವನ್ನು ಬಸವ ಜಯಂತಿ ಕಾರ್ಯಕ್ರಮಕ್ಕೆ ತೆಗೆದುಕೊಂಡು ಗೂಡ್ಸ್ ವಾಹನದಲ್ಲಿ ಹೋಗುತ್ತಿದ್ದರು. ಈ ವಾಹನದ ಹಿಂದೆ ಬರುತ್ತಿದ್ದ ಕಟ್ಟೆಮನುಗನಹಳ್ಳಿ ಗ್ರಾಮದ ಬಿ.ಸತೀಶ್ ಬಹದ್ದೂರ್ ಮತ್ತು ಮಹದೇವಸ್ವಾಮಿ, ಈ ಇಬ್ಬರು ತುರ್ತುವಾಹನದಲ್ಲಿ ಕೆಲವರನ್ನು ಕಳಿಸಿ, ಉಳಿದ ಕೆಲವರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆಲವ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಶಾಸಕ ಅನಿಲ್ ಚಿಕ್ಕಮಾದು, ತಮ್ಮ ಕೆಲಸಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ, ಬೆಂಗಳೂರಿನಿಂದ ನೇರವಾಗಿ ಆಸ್ಪತ್ರೆಗೆ ಆಗಮಿಸಿ, ವೈದ್ಯರೊಂದಿಗೆ ಚರ್ಚೆ ನಡೆಸಿದರು ಮತ್ತು ಕುಟುಂಬದವರಿಗೆ ಸಾಂತ್ವನ ಹೇಳಿದರು. ಆಸ್ಪತ್ರೆಗೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಗಾಯಗೊಂಡಿರುವವರ ಚಿಕಿತ್ಸೆಗೆ ಎಲ್ಲ ರೀತಿಯ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ.