ಗೂಡ್ಸ್ ಆಟೋ ಮೇಲೆ ಹತ್ತಿ ನಿಂತ ಕೆಎಸ್‌ಆರ್‌ಟಿಸಿ ಬಸ್ !

29 smg 3
Published on

ಶಿವಮೊಗ್ಗ: ತಾಲೂಕಿನ ಚೋರಡಿ ಬಳಿ ಶನಿವಾರ ಬೆಳಗ್ಗೆ ಅಡ್ಡ ಬಂದ ಬೈಕ್ ಸವಾರನ ಜೀವ ಉಳಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್ಸೊಂದು ರಸ್ತೆ ಪಕ್ಕದಲ್ಲಿದ್ದ ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದಿದ್ದಲ್ಲದೆ, ಮುಂದಿನ ಬಸ್‌ನ ಎರಡೂ ಚಕ್ರಗಳು ಆಟೋ ಮೇಲೆ ಹತ್ತಿವೆ. ಅಪಘಾತದಲ್ಲಿ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.

ಸಾಗರದಿಂದ ಶಿವಮೊಗ್ಗಕ್ಕೆ ಕೆಎಸ್‌ಆರ್‌ಸಿಟಿ ಬಸ್ ಬರುತ್ತಿದ್ದಾಗ ಏಕಾಏಕಿ ಬೈಕ್ ಸವಾರ ಅಡ್ಡ ಬಂದಿದ್ದ. ಆತನಿಗೆ ಅಪಘಾತ ಆಗುವುದನ್ನು ತಪ್ಪಿಸಲು ಚಾಲಕ ಮುಂದಾಗಾಗ ರಸ್ತೆ ಪಕ್ಕದ ಫುಟ್‌ಪಾತ್ ಮೇಲೆ ನಿಂತಿದ್ದ ಗುಡ್ಸ್ ಆಟೋಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಪಲ್ಟಿಯಾಗಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು.

ಬಸ್‌ನಲ್ಲಿ 25ರಿಂದ 30 ಪ್ರಯಾಣಿಕರು ಇದ್ದರು. ಚೋರಡಿಯಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟ ಕೆಲವೇ ಸೆಕೆಂಡ್‌ಗಳಲ್ಲಿ ಅಪಘಾತ ಸಂಭವಿಸಿದೆ. ಚೋರಡಿಡಯಲ್ಲಿ ಅನೇಕ ದಿನಗಳಿಂದ ಫುಟ್‌ಪಾತ್ ಮೇಲೆ ಗೂಡ್ಸ್ ಆಟೋ ನಿಂತಿತ್ತು. ಅದೃಷ್ಟವಶಾತ್ ಲಗೇಜ್ ಆಟೋದಲ್ಲೂ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net