ಗೂಡೆಹೊಸಹಳ್ಳಿಯಲ್ಲಿ ಲಕ್ಷ್ಮೀವೆಂಕಟೇಶ್ವರ ದೇಗುಲ ಉದ್ಘಾಟನೆ

20.kkr-2
ಕಿಕ್ಕೇರಿ ಹೋಬಳಿಯ ಗಡಿಭಾಗದ ಗೂಡೆಹೊಸಹಳ್ಳಿಯಲ್ಲಿ ಲಕ್ಷ್ಮೀವೆಂಕಟೇಶ್ವರ ದೇಗುಲ ಉದ್ಘಾಟನೆ ಹಿನ್ನೆಲೆಯಲ್ಲಿ ಸೋಮವಾರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಕಿಕ್ಕೇರಿ: ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ಲಕ್ಷ್ಮೀವೆಂಕಟೇಶ್ವರ ದೇವಾಲಯವನ್ನು ಉದ್ಘಾಟಿಸಲಾಯಿತು.

ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಪುಣ್ಯಾಹ ವಾಚನ, ಪ್ರಬಂಧ ಪಾರಾಯಣದೊಂದಿಗೆ ನೂತನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಮಹಾಕುಂಭ, ಉಪ ಕುಂಭಾರಾಧನೆ, ನಿತ್ಯಹೋಮ, ಶಾಂತಿ, ಪ್ರಾಯಶ್ಚಿತ, ಮಹಾ ಪೂರ್ಣಾಹುತಿ ಹೋಮ, ಕುಂಭೋದ್ವಾಸನೆ, ಕುಂಭಾಭಿಷೇಕ, ಪೂರ್ವಕಬಿಂಬ, ಪ್ರತಿಷ್ಠಾ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಕುಂಕುಮಾರ್ಚನೆ, ನೈವೇದ್ಯ ಮಂತ್ರಪುಷ್ಪ, ರಾಷ್ಟ್ರಾಶೀರ್ವಾದ ನಡೆದವು. ಗ್ರಾಮಸ್ಥರು, ಸುತ್ತಮುತ್ತಲ ಗ್ರಾಮದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇವರ ಒಕ್ಕಲಿನವರು ಅನ್ನದಾಸೋಹ ಏರ್ಪಡಿಸಿದ್ದರು.

ಉದ್ಯಮಿ ಗೂಡೆಹೊಸಹಳ್ಳಿ ಸುರೇಶ್, ಸುಬ್ಬಮ್ಮ, ಮೂಲೆಮನೆ ಮಂಜಮ್ಮ, ಬಾವಿ ಮನೆ ಕುಮಾರ್, ಮುರಳಿ, ಪಿತಾಜಿ ಯುವಕರ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net