ಗುವಿವಿ ಗೌರವ ಧನಕ್ಕೆ ಅರ್ಜಿ, ಕೃತಿ ಆಹ್ವಾನ

KLB GULBARGA UNIVERSITY
Published on

ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಲೇಖಕರಿಗೆ, ಕಲಾವಿದರಿಗೆ, ಪ್ರಕಾಶಕರಿಗೆ, ಗಡಿನಾಡ ಲೇಖಕರಿಗೆ ಹಾಗೂ ರಾಜ್ಯಮಟ್ಟದ ವಿಜ್ಞಾನ, ಅಂಬೇಡ್ಕರ್ ಕುರಿತ ಕೃತಿಗಳಿಗೆ ಗುಲ್ಬರ್ಗ ವಿವಿ ರಾಜ್ಯೋತ್ಸವ ನಿಮಿತ್ತ ನೀಡುವ ಗೌರವ ಧನಕ್ಕೆ ಅರ್ಜಿ, ಕೃತಿಗಳನ್ನು, ದಿ.ಜಯತೀರ್ಥ ರಾಜ ಪುರೋಹಿತ ಸ್ಮಾರಕ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಗೆ ಸಣ್ಣಕಥೆಗಳನ್ನು ಆಹ್ವಾನಿಸಲಾಗಿದೆ ಎಂದು ವಿವಿ ಪ್ರಸಾರಾಂಗ ವಿಭಾಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ತಿಳಿಸಿದ್ದಾರೆ.
ಪುಸ್ತಕ ಹಾಗೂ ಅರ್ಜಿ ಸಲ್ಲಿಸಲು ಆ.೩೧ ಕೊನೇ ದಿನ. ಮಾಹಿತಿಗೆ ೯೧ ೯೮೮೦೦ ೮೮೬೪೩ ಸಂಪರ್ಕಿಸಿ. ಅರ್ಜಿ/ಪುಸ್ತಕಗಳನ್ನು ಗುಲ್ಬರ್ಗ ವಿವಿ ಪ್ರಸಾರಾಂಗದ ನಿರ್ದೇಶಕರಿಗೆ (೫೮೫ ೧೦೬) ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಪ್ರಾದೇಶಿಕ ಮಟ್ಟದ ಪ್ರಶಸ್ತಿ: ಕಕ ಭಾಗದ ಸೃಜನ, ಸೃಜನೇತರ, ಲೇಖಕರು, ಚಿತ್ರ ಕಲಾಕೃತಿ (ಮೂರು), ಶಿಲ್ಪಕಲೆ (ಎರಡು), ಪ್ರಕಾಶಕರು, ಜನಪದ ಕಲಾವಿದ, ವಚನ, ಅನುವಾದ, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ತೆಲಗು ಹಾಗೂ ಗಡಿನಾಡ ಲೇಖಕರ ಕೃತಿ ತಲಾ ಒಬ್ಬ ಲೇಖಕರಿಗೆ ಐದುಸಾವಿರ ರೂ. ಪ್ರೋತ್ಸಾಹಧನ. ೨೦೨೩ರಲ್ಲಿ ಪ್ರಕಟವಾದ ಪುಸ್ತಕಗಳ ಐದು ಪ್ರತಿ ಸಲ್ಲಿಸಬೇಕು. ಪುಸ್ತಕ ಕನಿಷ್ಠ ೧೦೦ ಪುಟ, ಕವನ ಸಂಕಲನ ಕನಿಷ್ಠ ೭೦ ಪುಟ ಹೊಂದಿರಬೇಕು. ಚಿತ್ರ ಹಾಗೂ ಶಿಲ್ಪ ಕಲಾ ಕೃತಿ ಪ್ರಶಸ್ತಿಗೆ ಒಂದು ಕಲಾಕೃತಿ ಮಾತ್ರ ಕಳುಹಿಸಬೇಕು ಎಂದು ತಿಳಿಸಿದ್ದಾರೆ.
ರಾಜ್ಯ ಮಟ್ಟದ ಪ್ರಶಸ್ತಿ: ದಿ.ಜಯತೀರ್ಥ ರಾಜಪುರೋಹಿತ ಸ್ಮರಣಾರ್ಥ ಸ್ಮಾರಕ ದತ್ತಿ ರಾಜ್ಯ ಮಟ್ಟದ ಸಣ್ಣ ಕಥಾ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಿದ್ದು, ಮೂರು ಕಥೆಗೆ ಬಹುಮಾನ ನೀಡಲಾಗುತ್ತದೆ. ವಿಜ್ಞಾನ ವಿಷಯದ ಕನ್ನಡದ ಪುಸ್ತಕಕ್ಕೆ ಐದು ಸಾವಿರ ನಗದು ಈಡಲಾಗುತ್ತದೆ.
ಡಾ.ಬಿ.ಆರ್.ಅಂಬೇಡ್ಕರ್ ಕೃತಿಗೆ ರಾಜ್ಯಮಟ್ಟದ ಪ್ರಶಸ್ತಿ: ದಿ.ಮಾಪಮ್ಮ ಶಂಭುಲಿAಗ ಹೊಸಮನಿ ಅವರ ಸ್ಮರಣಾರ್ಥ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅಥವಾ ಆ ಪರಿಸರದ ಕುರಿತು ಕನ್ನಡದಲ್ಲಿ ಪ್ರಕಟಿಸಿದ ಗ್ರಂಥಕ್ಕೆ ಐದು ಸಾವಿರ ನಗದು, ಪ್ರಶಸ್ತಿ ಫಲಕ ನೀಡಲಾಗುತ್ತದೆ. ರಾಜ್ಯಮಟ್ಟದ ಪ್ರಶಸ್ತಿಗೆ ಸ್ಪರ್ಧಿಸಲು ಇಚ್ಚಿಸಿರುವವರು ಐದು ಪ್ರತಿಗಳನ್ನು ಖುದ್ದಾಗಿ ಪ್ರಸಾರಾಂಗಕ್ಕೆ ಸಲ್ಲಿಸಬೇಕು.
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಐಎಫ್‌ಎಸ್‌ಸಿ ಕೋಡ್, ಪಾನ್ ಕಾರ್ಡ್, ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್, ಫೋಟೋ ಮೊಬೈಲ್ ನಂಬರ್ ಮತ್ತು ಇ-ಮೇಲ್, ದಾಖಲೆಯ ನಕಲು ಪ್ರತಿ ನೀಡಬೇಕು. ಒಮ್ಮೆ ಪ್ರಶಸ್ತಿ ಪಡೆದವರು ಕನಿಷ್ಠ ಮೂರು ವರ್ಷಗಳವರೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net