ಗುಳ್ಳಮ್ಮದೇವಿ ಅದ್ದೂರಿ ಜಾತ್ರಾ ಮಹೋತ್ಸವ

14 BIRUR 01 web
?????????????????????????????????????????????????????????????????????????????????????????????????????????????????????????????????
Published on

ಬೀರೂರು: ಬಳ್ಳಾರಿ ಕ್ಯಾಂಪ್​ನಲ್ಲಿ ಶ್ರೀ ಗುಳ್ಳಮ್ಮದೇವಿ ಜಾತ್ರಾ ಮಹೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು. ಪ್ಲೇಗಿನಮ್ಮ ಎಂದೇ ಖ್ಯಾತಿ ಪಡೆದಿರುವ ಶ್ರೀ ಗುಳ್ಳಮ್ಮ ದೇವಿಯ ಧಾರ್ವಿುಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ಧ್ವಜಾರೋಹಣ, ಸೋಮವಾರ ಗಣಂಗಳ ಸೇವೆ ನಡೆಯಿತು. ಮಂಗಳವಾರ ಬೆಳಗ್ಗೆ ಕೆಂಡಾರ್ಚನೆ ಹಮ್ಮಿಕೊಳ್ಳಲಾಗಿತ್ತು. ನೂರಾರು ಭಕ್ತರು ಕೆಂಡ ಹಾದು ದೇವಿಗೆ ಹರಕೆ ತೀರಿಸಿದರು.

ಪಟ್ಟಣದ ರಾಜಬೀದಿಗಳಲ್ಲಿ ಪುಷ್ಪ ಮಂಟಪದಲ್ಲಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ಮಂಗಳವಾದ್ಯಗಳೊಂದಿಗೆ ಉತ್ಸವ ನಡೆಯಿತು. ಮಧ್ಯಾಹ್ನ ಭಕ್ತರಿಂದ ಬೇವಿನ ಸೀರೆ ಸೇವೆಯಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಪಾಲ್ಗೊಂಡರು. ಸಂಜೆ ಮಹಾಮಂಗಳಾರತಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net