ಗುಳೆ ಹೋಗಿದ್ದವರಿಗೆ ಒಂದು ದಿನದ ರತ್ನಗಂಬಳಿ

pixlr_20201227103214683
Published on

ಬಾಗಲಕೋಟೆ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು, ಬೆಂಗಳೂರು, ಗೋವಾ, ಮಹಾರಾಷ್ಟ್ರಕ್ಕೆ ಕೆಲಸಕ್ಕಾಗಿ ಗುಳೆ ಹೋಗಿದ್ದ ಕಾರ್ಮಿಕರು ಮತದಾನಕ್ಕಾಗಿ ತಮ್ಮ ಸ್ವಗ್ರಾಮಗಳಿಗೆ ಹಿಂತಿರುಗುತ್ತಿರುವ ಗ್ರಾಮಸ್ಥರಿಗೆ ಒಂದು ದಿನದ ರತ್ನಗಂಬಳಿ ಸ್ವಾಗತವನ್ನು ಅಭ್ಯರ್ಥಿಗಳು ನೀಡುತ್ತಿರುವುದು ಕಂಡು ಬಂದಿದೆ.

ಬಾಗಲಕೋಟೆ ಜಿಲ್ಲೆ ಇಳಕಲ್, ಗುಳೇದಗುಡ್ಡ ಬಸ್ ನಿಲ್ದಾಣಗಳಲ್ಲಿ ನೂರಾರು ಜನರು ಬಂದಿಳಿದಿದ್ದಾರೆ.

ಅವರಿಗೆ ಬಂದು ಹೋಗಲು ವಾಹನ ಚಾರ್ಜ್, ಊಟ, ತಿಂಡಿಗಾಗಿ ಎರಡು ಸಾವಿರ ರೂ. ಕೊಡುವ ಭರವಸೆ ಮೇಲೆ ಮತ ಹಾಕಲು ಬಂದಿರುವುದಾಗಿ ಕೆಲವು ಮತದಾರರು ತಿಳಿಸಿದ್ದಾರೆ.

ಇಳಕಲ್ ಬಸ್ ನಿಲ್ದಾಣದಿಂದ ಪಕ್ಕದ ರಾಯಚೂರ ಜಿಲ್ಲೆಗೆ ಹೋಗುವ ಜನರು ಸಹ ಇದ್ದಾರೆ. ಇತ್ತ ಬಾದಾಮಿ ಕ್ಷೇತ್ರದ ಗುಳೇದಗುಡ್ಡ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಅವರಿಗೆ ಗುಳೇದಗುಡ್ಡ ಕಾಂಟೇನ್ ನಲ್ಲಿ ಉಪಾಹಾರ ಮಾಡಿಸಿ ಬಳಿಕ ಗ್ರಾಮಗಳಿಗೆ ಕರೆದುಕೊಂಡು ಹೋಗಲು ವ್ಯವಸ್ಥೆಯನ್ನು ಅಭ್ಯರ್ಥಿಗಳ ಹಿಂಬಾಲಕರು ಮಾಡಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net