

ಅರಟಾಳ: ಇಂಚಗೇರಿ ಸಂಪ್ರದಾಯದಲ್ಲಿ ಅಗಾಧ ಶಕ್ತಿ ಅಡಗಿದೆ. ಭಾರತೀಯ ಸಂಸ್ಕೃತಿಯಲ್ಲಿ ದೇವರ ಬಗ್ಗೆ ಇರುವ ಶ್ರದ್ಧೆ, ಭಕ್ತಿಯ ಪ್ರತೀಕವಾಗಿ ದೇವಸ್ಥಾನಗಳು ನಿರ್ಮಾಣಗೊಳುತ್ತಿವೆ ಎಂದು ಶೂರ್ಪಾಲಿ ಗಿರೀಶಾನಂದ ಮಹಾರಾಜರು ಹೇಳಿದರು.
ಗ್ರಾಮದಲ್ಲಿ ಶ್ರೀ ಅವಜೀಕರ ಮಹಾರಾಜರ ೨೬ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಪ್ತಾಹ ಕಾರ್ಯಕ್ರಮಲ್ಲಿ ಮಾತನಾಡಿ, ನಾವು ಮಾಡುವ ದಾನ, ಧರ್ಮ ನಮ್ಮನ್ನು ಕಷ್ಟದ ಕಾಲದಲ್ಲಿ ಕಾಯುತ್ತದೆ. ಅಂತರಂಗ ಶುದ್ಧೀಕರಿಸಲು ಸದ್ಗುರುವಿನ ಮಾರ್ಗದರ್ಶನ ಅತಿ ಮುಖ್ಯ. ಅವಜೀಕರ ಮಹಾರಾಜರು ತೋರಿದ ಮಾರ್ಗದಲ್ಲಿ ನಡೆದರೆ ಜೀವನಮುಕ್ತಿ ಹೊಂದಲು ಸಾಧ್ಯ ಎಂದು ತಿಳಿಸಿದರು.
ಕಮಿಟಿ ಅಧ್ಯಕ್ಷ ಡಾ. ಎಸ್. ಆರ್.ರಾಮನಗೌಡರ ಮಾತನಾಡಿ, ಅಧ್ಯಾತ್ಮಕ್ಕೆ ಸಮಯ ನೀಡಿದವರು ಆತ್ಮಜ್ಞಾನಿಗಳಾಗುತ್ತಾರೆ. ಎಲ್ಲರೂ ಸದ್ಗುರುವಿನ ಆಶೀರ್ವಾದ ಪಡೆದುಕೊಳ್ಳಬೇಕು ಎಂದರು.
ಸದ್ಗುರು ವಾಣಿ ಗ್ರಂಥ ಬಿಡುಗಡೆ ಮಾಡಲಾಯಿತು. ಸೊಲ್ಲಾಪುರ ಯಾದಗಿರಿ ಮಹಾರಾಜರು, ಚಿಕ್ಕ ಅಳಗುಂಡಿ ಶಿವಶರಣನಂದ ಮಹಾರಾಜರು, ಮಹಾದೇವ ಶರಣರು, ಶ್ರೀಶೈಲ ಕಲಘಟಗಿ, ಅಣ್ಣಾಸಾಹೇಬ ಅಡಹಳ್ಳಿ, ಲಕ್ಷ್ಮಣ ಗುಗ್ಗರಿ, ಈಶ್ವರಲಿಂಗ ಕಲಘಟಗಿ, ರಮೇಶ ಜಾಧವ, ಅವಜೀಶ ಕಲಘಟಗಿ, ಆನಂದ ಕಲಘಟಗಿ ಇತರರಿದ್ದರು. ಎ.ಟಿ.ಮಾಳಿ ನಿರೂಪಿಸಿದರು.