

ಹುಕ್ಕೇರಿ: ಜೀವನದ ಯಶಸ್ಸಿಗೆ ಗುರುಗಳ ಮಾರ್ಗದರ್ಶನ ಅವಶ್ಯ. ನಮಗೆ ಅರ ಜ್ಞಾನ ನೀಡಿದ ಗುರುವಿನ ಋಣ ಎಂದಿಗೂ ಮರೆಯಬಾರದು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಟ್ಟಣದ ವಿಶ್ವರಾಜ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹುಕ್ಕೇರಿ ತಾಲೂಕಾ ಮಟ್ಟದ ಶಿಕರ ದಿನಾಚಾರಣೆ, ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿ ಸಮಾರಂಭದ ಅಧ್ಯತೆ ವಹಿಸಿ ಅವರು ಮಾತನಾಡಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಉನ್ನತ ಅಧಿಕಾರಿ, ಜನಪ್ರತಿನಿಧಿ ಅಥವಾ ಯಶಸ್ವಿ ಮನುಷ್ಯನ ಸಾಧನೆಯ ರೂವಾರಿಗಳೆಂದರೆ ವಿದ್ಯೆ ನೀಡಿದ ಗುರು. ಅಂತಹ ಗುರುಗಳನ್ನು ನಿತ್ಯ ಸ್ಮರಿಸಬೇಕು ಎಂದರು.
ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯನಿರತ ಶಿಕರು , ನಿವೃತ್ತ ಶಿಕರನ್ನು ಸನ್ಮಾನಿಸಲಾಯಿತು. ವಿಠ್ಠಲ ಜೋಡಟ್ಟಿ ಉಪನ್ಯಾಸ ನೀಡಿದರು. ತಹಸೀಲ್ದಾರ್ ಮಂಜುಳಾ ನಾಯಿಕ, ತಾಪಂ ಇಒ ಪ್ರವಿಣ ಕಟ್ಟಿ, ಎ.ಎಸ್.ಪದ್ಮನ್ನವರ, ಸವಿತಾ ಹಲಕಿ, , ಎಂ.ಬಿ.ನಾಯಿಕ, ಅವಿನಾಶ ಹೊಳೆಪ್ಪಗೋಳ, ಬಿಇಒ ಪ್ರಭಾವತಿ ಪಾಟೀಲ, ಶಿವಾನಂದ ಗುಂಡಾಳೆ ಇತರರಿದ್ದರು.