ಗುರುವಿಗೆ ಶಿಷ್ಯರ ವಂದನೆ ೧೫ರಂದು

Mala kanni
Published on

ಕಲಬುರಗಿ: ನಗರದ ಬಿರಾದಾರ ಟ್ಯುಟೋರಿಯಲ್ಸ್ ಶಿಕ್ಷಕ, ನಂದಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಮೇಶ ಬಿರಾದಾರ ಅವರಿಗೆ ಗುರುವಂದನಾ ಕಾರ್ಯಕ್ರಮ ಹಾಗೂ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸೆ.೧೫ರಂದು ನಡೆಯಲಿದೆ ಎಂದು ಹಳೇ ವಿದ್ಯಾರ್ಥಿನಿ ಮಾಲಾಕಣ್ಣಿ ಹೇಳಿದರು.
ನಗರದ ಗಂಜ್‌ಬಸ್ ಸ್ಟಾÈಂಡ್ ಎದುರು ಇರುವ ಲಾಹೋಟಿ ಮಂಗಲ ಕಾರ್ಯಾಲಯದಲ್ಲಿ ಸೆ.೧೫ರಂದು ಬೆಳಗ್ಗೆ ೧೦ಕ್ಕೆ ಕಾರ್ಯಕ್ರಮ ನಡೆಯಲಿದೆ. ಹಳೇ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊನ್ನಕಿರಣಗಿಯ ಶ್ರೀ ಚಂದ್ರಗುAಡ ಶಿವಾಚಾರ್ಯರು, ಮುತ್ಯಾನ ಬಬಲಾದದ ಶ್ರೀ ಗುರುಪಾದಲಿಂಗ ಶಿವಯೋಗಿಗಳು, ಚಿನ್ಮಯಗಿರಿಯ ಶ್ರೀ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದು, ಆಶೀರ್ವಚನ ನೀಡಲಿದ್ದಾರೆ. ಗುರುವಿಗೆ ಹಳೇ ವಿದ್ಯಾರ್ಥಿಗಳೆಲ್ಲರೂ ಭಾಗವಹಿಸಲಿದ್ದಾರೆ. ನವೋದಯ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು.
ಪ್ರಮುಖರಾದ ಬಸವರಾಜ ಬಿರಾದಾರ, ರುದ್ರಮುನಿ ಹಿರೇಮಠ, ರಾಕೇಶ ಅಳ್ಳಗಿ, ಶಿವಕುಮಾರ ಮಳ್ಳಿ, ಸುನೀಲ ತಿಪ್ಪಶೆಟ್ಟಿ ಇತರರಿದ್ದರು.

ನಿವೇಶನ ಗುರುಕಾಣಿಕೆ: ಕಳೆದ ಮೂರು ದಶಕದಿಂದ ನಗರದಲ್ಲಿ ಟ್ಯುಷನ್ ಮೂಲಕ ಶಿಕ್ಷಣ ನೀಡುತ್ತಿರುವ ರಮೇಶ ಬಿರಾದಾರ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದ್ದರು. ಎಂದಿಗೂ ಫೀಸ್ ಹಿಂದೆ ಬೀಳದೆ ಶಿಕ್ಷಣ ನೀಡಿದ್ದಾರೆ. ಅವರಿಂದ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ, ವಿದೇಶದಲ್ಲೂ ಕೆಲಸ ಮಾಡುತ್ತಿದ್ದಾರೆ. ಉನ್ನತ ಸ್ಥಾನಗಳಲ್ಲಿ ಇದ್ದಾರೆ. ಆದ್ದರಿಂದ ಅವರಿಗೆ ಗುರುಕಾಣಿಕೆಯಾಗಿ ಒಂದು ನಿವೇಶನ ನೀಡುತ್ತಿz್ದೆÃವೆ ಎಂದು ಮಾಲಾಕಣ್ಣಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net