ಗುರುವಾರದ ಸಂತೆಗೆ ಅವಕಾಶ ನೀಡಬೇಡಿ

Capture2
Published on

ಹುಲಸೂರು: ಪಟ್ಟಣದ ಗಾಂಧಿ ವೃತ್ತದಲ್ಲಿ ಆರು ದಶಕದಿಂದ ಪ್ರತಿ ಸೋಮವಾರ ವಾರದ ಸಂತೆ ಯಾವುದೇ ತೊಂದರೆ ಇಲ್ಲದೆ ನಡೆಯುತ್ತದೆ. ಆದರೆ ಕೆಲವರು ವಿನಾ ಕಾರಣ ಗುರುಬಸವೇಶ್ವರ ಸಂಸ್ಥಾನ ಮಠದ ಹತ್ತಿರದ ಮುಖ್ಯ ರಸ್ತೆಯ ಮೇಲೆ ಗುರುವಾರ ಇನ್ನೊಂದು ವಾರದ ಸಂತೆ ಪ್ರಾರಂಭ ಮಾಡಲು ಹೊರಟಿದ್ದಾರೆ. ಇದಕ್ಕೆ ಅವಕಾಶ ನೀಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ವ್ಯಾಪಾರಸ್ಥರು ಎಚ್ಚರಿಸಿದ್ದಾರೆ.

ಪಟ್ಟಣದ ಗಾಂಧಿ ವೃತ್ತದ ನೂರಾರು ವ್ಯಾಪಾರಸ್ಥರು ಸೋಮವಾರ ತಹಸಿಲ್ ಕಾಯರ್ಾಲಯಕ್ಕೆ ಭೇಟಿ ನೀಡಿ ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ದಲಿತ ಮುಖಂಡ ಪ್ರಹ್ಲಾದ್ ಮೋರೆ ಮಾತನಾಡಿ, ಗಾಂಧಿ ವೃತ್ತ ಪಟ್ಟಣದ ಮಧ್ಯಭಾಗದಲ್ಲಿದ್ದು, ವಿವಿಧ ಗ್ರಾಮಗಳಿಂದ ಬಂದ ವ್ಯಾಪಾರಸ್ಥರಿಗೂ ಸಹ ವಹಿವಾಟು ಮಾಡಲು ಸ್ಥಳದ ಅವಕಾಶ ಇದೆ. ಪ್ರತಿ ಸೋಮವಾರ ತಾವು ತಂದಿರುವ ತರಕಾರಿ ಮತ್ತು ದಿನಸಿ ವಸ್ತುಗಳನ್ನು ಮಾರಾಟ ಮಾಡಿ ತೆರಳುತ್ತಾರೆ. ಆದರೆ ಕೆಲ ವ್ಯಾಪಾರಸ್ಥರು ವಿನಾ ಕಾರಣ ಗುರುವಾರ ಸಂತೆ ಪ್ರಾರಂಭ ಮಾಡಲು ಹೊರಟಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಗ್ರಾಪಂ ಸದಸ್ಯ ಜಗನಾಥ ದೇಟ್ನೆ ಮಾತನಾಡಿ, ಮಠದ ಹತ್ತಿರದ ಮುಖ್ಯರಸ್ತೆ ಮೇಲೆ ವ್ಯಾಪಾರ ಪ್ರಾರಂಭ ಮಾಡಿದರೆ ಸಂಚಾರಕ್ಕೆ ಸಂಚಕಾರ ಉಂಟಾಗುತ್ತದೆ. ವಾಹನಗಳು ಸುಗಮವಾಗಿ ಸಂಚಾರ ಮಾಡಲು ಸ್ಥಳದ ಕೊರತೆ ಆಗುತ್ತದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಸಂಜುಕುಮಾರ ಭುಸಾರೆ, ಸದಸ್ಯರಾದ ನಾಗೇಶ ಮೇತ್ರೆ, ಸಂತೋಷ ಗಾಯಕವಾಡ, ಮನ್ಸೂರ್ ದಾವಲಜಿ, ಗ್ರಾಪಂ ಮಾಜಿ ಅಧ್ಯಕ್ಷ ರಘುನಾಥ ಮೇತ್ರೆ, ಪ್ರಮುಖರಾದ ತ್ರಿಮುಖರಾವ ಜೀವಾಯಿ, ದೇವೇಂದ್ರ ಪಾರಶೆಟ್ಟೆ, ಶಿವಕುಮಾರ ನಂಜವಾಡೆ, ವೀರಪ್ಪ ಪಂಚಾಳ, ರುದ್ರಮಣಿ ಖಿಂಡಿಮಠ, ನಾಗೇಶ ಮೋರೆ, ರಾಜಪ್ಪ ಚಿಲ್ಲರಗೆ, ಗುಣವಂತರಾವ ಹಾಲಸೆ, ರಂಗರಾವ ಮುಸ್ತಾಪುರೆ, ಮಲ್ಲಿಕಾಜರ್ುನ ಗೋರಟೆ, ಬಸವರಾಜ ಕಾಮಶೆಟ್ಟಿ, ಸಮದ್ ಸೌದಾಗರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net