ಗುರುವಾರ ಹಾಸನ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

New Power Cut
Published on

ಹಾಸನ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ ಏ.24ರ ಗುರುವಾರ 66/11ಕೆ.ವಿ ಚಿಕ್ಕಕೊಂಡಗೊಳ, ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಿಕ್ಕಕೊಂಡಗೊಳ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ವಿದ್ಯಾನಗರ, ಚಿಕ್ಕಹೊನ್ನೇನಹಳ್ಳಿ, ಎಂಸಿಎಫ್ ಕ್ವಾಟ್ರಸ್, ಹರಳಹಳ್ಳಿ, ಗುಂಡೇಗೌಡನಕೊಪ್ಪಲು, ಎಂಜಿ ರಸ್ತೆ, ಮಾವಿನಹಳ್ಳಿ, ರಿಂಗ್ ರಸ್ತೆ, ಜಯನಗರ, ಆಕಾಶವಾಣಿ, ಸರ್ಕಾರಿ ವಿಜ್ಞಾನ ಕಾಲೇಜು, ಆರ್‌ಸಿ ರಸ್ತೆ, ರಂಗೋಲಿಹಳ್ಳ, ಉತ್ತರ ಬಡಾವಣೆ, ಸದಾಶಿವನಗರ, ಪೆನ್ಷನ್ ಮೊಹಲ್ಲ, 80 ಫೀಟ್ ರಸ್ತೆ, ರಾಜ್‌ಕುಮಾರ್ ನಗರ, ಹೇಮಾವತಿ ನಗರ ಮತ್ತು ಕಬ್ಬಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕವಿಪ್ರನಿನಿ, ಹಾಸನದ ಕಾರ್ಯಾಚರಣೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net