ಗುರುವಾರ ಮೈಸೂರು ವಿಭಾಗ ಮಟ್ಟದ ಯುವ ಕವಿಗೋಷ್ಠಿ

Hassan kasapa
Published on

ಹಾಸನ: ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಮೈಸೂರು ವಿಭಾಗ ಮಟ್ಟದ ಯುವ ಕವಿಗೋಷ್ಠಿ ಜೂ.5ರ ಗುರುವಾರ ಬೆಳಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಡೆಯಲಿದೆ.

ಕವಿಗೋಷ್ಠಿ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್.ಎನ್.ಮುಕುಂದರಾಜ್ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಸದಸ್ಯರಾದ ಎಚ್.ಆರ್.ಸುಜಾತಾ ಆಶಯ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ ಹಾಗೂ ಸದಸ್ಯ ಡಾ.ಚಂದ್ರಕಿರಣ್ ಕುಳವಾಡಿ ಉಪಸ್ಥಿತರಿರುವರು.

ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ಯುವ ಕವಿಗೋಷ್ಠಿ ನಡೆಯಲಿದ್ದು, ಮೈಸೂರಿನ ಎಸ್.ಶಿಶಿರಂಜನ, ಪ್ರಶಾಂತ್ ಕುಮಾರ್, ಚಾಮರಾಜನಗರದ ಜೆ.ರೋಹಿಣಿ, ಕಿರಣ್ ಕುಮಾರ್, ಎಚ್.ಡಿ.ಮಹೇಶ್, ಮಂಡ್ಯದ ಆರ್.ಎಸ್.ರಂಜಿತಾ, ಮೊಹಮ್ಮದ್ ಅಜರುದ್ದೀನ್, ಉಡುಪಿಯ ರಾಮಾಂಜಿ, ಕೊಡಗಿನ ಮಿಲನಾ ಕೆ.ಭರತ್, ರಮ್ಯ ಕೆ.ಜಿ.ಮೂರ್ನಾಡು, ಲವಿನ್ ಲೋಪೇಸ್, ಕೃತಜ್ಞಾ ಬೆಸೂರು, ಹಾಸನದ ಹರೀಶ್ ಕೋಳಗುಂದ, ಚೆಂಬುವಿನ ಕುಸುಮಾಕರ ಅಂಬೆಕಲ್ಲು, ಕಾಸರಗೋಡಿನ ಎ. ಹಿತೇಶ್ ಕುಮಾರ್ ಹಾಗೂ ಚಿಕ್ಕಮಗಳೂರಿನ ಗಿರೀಶ್ ಮೂಗ್ತಿಹಳ್ಳಿ ಭಾಗಿಯಾಗುವರು. ಕರ್ನಾಟಕ ಅಕಾಡೆಮಿ ಸದಸ್ಯರಾದ ಪ್ರಕಾಶ್ ರಾಜ್ ಮೇಹು ನಿರ್ವಹಣೆ ಮಾಡುವರು.

ಮಧ್ಯಾಹ್ನ 2 ಗಂಟೆಗೆ ಕಾವ್ಯವೆಂಬ ಕುತೂಹಲ ಉಪನ್ಯಾಸ ಹಾಗೂ ಸಂವಾದ ನಡೆಯಲಿದ್ದು, ಮೈಸೂರಿನ ಹಿರಿಯ ಸಾಹಿತಿ ಪ್ರೊ.ಸಿ.ನಾಗಣ್ಣ ಉಪನ್ಯಾಸ ನೀಡುವರು. ಅಕಾಡೆಮಿ ಸದಸ್ಯರಾದ ಡಾ.ಜಯಪ್ರಕಾಶ್ ಶೆಟ್ಟಿ, ಡಾ.ಚಿಕ್ಕಮಗಳೂರು ಗಣೇಶ್ ಹಾಗೂ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ ಉಪಸ್ಥಿತರಿರುವರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್. ಕರಿಯಪ್ಪ ಮತ್ತು ಸದಸ್ಯ ಸಂಚಾಲಕರಾದ ಎಚ್.ಆರ್.ಸುಜಾತಾ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net