ಗುರುವರ್ಯರ ರಥ, ಮಹಾದ್ವಾರ ನಿರ್ಮಾಣ

26-gdg-8
Published on

ಗದಗ: ನಗರದ ಸುಕ್ಷೇತ್ರ ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ. ಪಂಚಾಕ್ಷರ ಗುರುಗಳ ಹಾಗೂ ಲಿಂ. ಡಾ. ಪಂ. ಪುಟ್ಟರಾಜ ಕವಿ ಗುರುವರ್ಯರ ರಥ ಹಾಗೂ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಪುಣ್ಯಾಶ್ರಮದ ಶ್ರೀಕಲ್ಲಯ್ಯಜ್ಜನವರು ಮಾತನಾಡಿ, 40 ಲಕ್ಷ ರೂ. ವೆಚ್ಚದಲ್ಲಿ ನೂತನ ರಥ ನಿರ್ವಣಕ್ಕೆ ಯೋಜನೆ ರೂಪಿಸಲಾಗಿದೆ. ಮುಂಬರುವ ಶ್ರೀಗಳ ಪುಣ್ಯಸ್ಮರಣೋತ್ಸವ, ಜಾತ್ರಾಮಹೋತ್ಸವ ಕಾರ್ಯಕ್ರಮದ ಸಮಯಕ್ಕೆ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದರು.

ನಾಡಿನಾದ್ಯಂತ ಹಲವಾರು ಮಠ-ಮಂದಿರಗಳಿಗೆ ಕಲಾತ್ಮಕವಾಗಿ ರಥವನ್ನು ನಿರ್ಮಾಣ ಮಾಡಿಕೊಟ್ಟ ಅಂಚಟಗೇರಿಯ ರಥಶಿಲ್ಪಿಗಳಾದ ವಜ್ರಪ್ಪ ಸಹೋದರರು ಹಾಗೂ ಬಳಗದವರು ಶೀಘ್ರ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದರು.

ನೂತನವಾಗಿ ನಿರ್ವಣವಾಗುತ್ತಿರುವ ರಥ ಹಾಗೂ ಮಹಾದ್ವಾರ ನಿರ್ವಣಕ್ಕೆ ನಾಡಿನ ಸಕಲ ಸದ್ಭಕ್ತರು ಸಹಾಯ ಸಹಕಾರ ನೀಡಿ ಗುರುವರ್ಯರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಫೀರಸಾಬ ಕೌತಾಳ ಮಾತನಾಡಿ, ಆಶ್ರಮದ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಹಾಯ, ಸಹಕಾರ ಸದಾ ಇರುತ್ತದೆ ಎಂದರು. ಶ್ರೀ ರುದ್ರಾರಾಧ್ಯ ಶಾಸ್ತ್ರಿಗಳು ಕೋಡಿಕೊಪ್ಪ ಮಾತನಾಡಿ, ಆಶ್ರಮದ ತಮ್ಮ ಹಿಂದಿನ ವಿದ್ಯಾಭ್ಯಾಸ ಹಾಗೂ ಪರಂಪರೆಯ ಬಗ್ಗೆ ಮಾತನಾಡಿದರು. ಡಾ. ಪಿ.ಜಿ.ಎ.ಎಸ್. ಸಮಿತಿಯ ಆಡಳಿತಾಧಿಕಾರಿ ಪಿ.ಸಿ. ಹಿರೇಮಠ, ಪಿ.ಬಿ. ಹಿಡ್ಕಿಮಠ ಮತ್ತಿತರರು ಇದ್ದರು. <p

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net