ಗುರುವಂದನೆ, ಸ್ನೇಹ ಸಮ್ಮಿಲನ 5ಕ್ಕೆ

Mahantha
Published on

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಕೋನಸಾಗರದ ವಿಶಾಲಾಕ್ಷಿ ಗ್ರಾಮಾಂತರ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 5ರಂದು ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ನಿವೃತ್ತ ಶಿಕ್ಷಕರನ್ನು ಸಾರೋಟಿನೊಳಗೆ ಕುಳ್ಳಿರಿಸಿ, ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೂ ಗ್ರಾಮದ ರಾಜಬೀದಿಗಳಲ್ಲಿ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ ಆಯೋಜಿಸಲಾಗಿದೆ.

ಮಧ್ಯಾಹ್ನ 12.30ರಿಂದ 2ರವರೆಗೂ ವೇದಿಕೆ ಕಾರ್ಯಕ್ರಮ. 2ರಿಂದ ಸಂಜೆ 6ರವರೆಗೂ ಗುರುಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಸನ್ಮಾನ, ಭಾಷಣ, ಹಳೆಯ ವಿದ್ಯಾರ್ಥಿಗಳ ಅನಿಸಿಕೆ ಕಾರ್ಯಕ್ರಮ ನಡೆಯಲಿದೆ.

1985ನೇ ಸಾಲಿನಿಂದ 2023ರವರೆಗಿನ ಎಲ್ಲಾ ವಿದ್ಯಾರ್ಥಿಗಳು, ಕೋನಸಾಗರ, ಉಡೇವು, ನೇತ್ರನಹಳ್ಳಿ, ಚೌಡೀಪುರ, ಭದ್ರಪ್ಪನ ತೋಪು, ಕುಂಟೋಬಯ್ಯನಟ್ಟಿ, ಕೆಂಗೋಬಯ್ಯನಹಟ್ಟಿ, ಕಪ್ಡ ಬಂಡೆಹಟ್ಟಿ, ಸಣ್ಣ ಪಾಪಯ್ಯನಹಟ್ಟಿ, ಏಣಿ ಮೇಗಳಹಟ್ಟಿ, ಜಾಲಾಳ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಲಿದ್ದಾರೆ.

ಸಂಜೆ 7ರ ನಂತರ ಜ್ಯೂನಿಯರ್ ವಿಷ್ಣುವರ್ಧನ್, ರವಿಚಂದ್ರನ್, ಬಿ.ಜಿ.ಕೆರೆ ಉಪ್ಪಿ ಮೆಲೋಡಿಸ್ ಆರ್ಕೇಸ್ಟ್ರಾ ಸೇರಿ ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹಳೆಯ ವಿದ್ಯಾರ್ಥಿ ಎಂ.ಮಹಂತ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net