ಗುರುರಾಯರ ಪೂರ್ವಾರಾಧನೆ ಸಂಪನ್ನ

CTD Guru Rayaru
Published on

ಚಿತ್ರದುರ್ಗ: ನಗರದ ಚಿಕ್ಕಪೇಟೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯಿಂದ 354ನೇ ವರ್ಷದ ಆರಾಧನಾ ಪಂಚರಾತ್ರೋತ್ಸವ ಅಂಗವಾಗಿ ಗುರುಸಾರ್ವಭೌಮರ ಪೂರ್ವಾರಾಧನೆ ಭಾನುವಾರ ಶ್ರದ್ಧಾ-ಭಕ್ತಿಯಿಂದ ಜರುಗಿತು.

ಆರಾಧನೆ ಪ್ರಯುಕ್ತ ಸ್ವಾಮಿಗೆ ವಿವಿಧ ಬಗೆಯ ಪುಷ್ಪಗಳಿಂದ, ಹೂವಿನ ಹಾರದಿಂದ ವೈವಿಧ್ಯಮಯ ಅಲಂಕಾರ ಸೇವೆ ನೆರವೇರಿತು.

ಮುಂಜಾನೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕ, ಪಾದಪೂಜೆ, ಕನಕಾಭಿಷೇಕ, ಮಹಾಪೂಜೆ, ಸರ್ವ ಸೇವಾ, ಅಲಂಕಾರ ಸೇವೆ, ಮಹಾ ನೈವೇದ್ಯ ಸೇರಿ ಇನ್ನಿತರೆ ಪೂಜೆಗಳು ಜರುಗಿದವು.

ಸ್ವಾಮಿಯ ಭಕ್ತರು ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮಹಾ ಮಂಗಳಾರತಿ ಬಳಿಕ ತೀರ್ಥ, ಮಂತ್ರಾಕ್ಷತೆ, ಪ್ರಸಾದ ವಿತರಿಸಲಾಯಿತು. ನೆರೆದಿದ್ದ ಭಕ್ತರು ಮಹಾ ಅನ್ನಪ್ರಸಾದದಲ್ಲಿ ಪಾಲ್ಗೊಂಡರು.

ಸೋಮವಾರ ಮಧ್ಯಾರಾಧನೆ, ಮಂಗಳವಾರ ಉತ್ತರಾರಾಧನೆ ನಡೆಯಲಿದ್ದು, ನಗರದ ರಾಜ ಬೀದಿಗಳಲ್ಲಿ ವೇದ ಘೋಷದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಹಾಗೂ ಮಠದಲ್ಲಿ ರಥೋತ್ಸವ ಸೇವೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net